Monday, October 2, 2023

Latest Posts

HEALTH | ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್‌ನಿಂದ ದೂರ ಇರಲು ಈ ಆರೋಗ್ಯಕರ ಅಭ್ಯಾಸ ರೂಢಿಸಿ ಸಾಕು..

ಬ್ರೆಸ್ಟ್ ಕ್ಯಾನ್ಸರ್, ಹೆಸರು ಕೇಳಿದಂತೆಯೇ ಒಂದು ಕ್ಷಣ ಭಯವಾಗುತ್ತದೆ. ನಮಗೆ ಗೊತ್ತಿರುವ ಒಬ್ಬರಿಗಾದರೂ ಈ ಸಮಸ್ಯೆ ಕಾಡಿಯೇ ಇರುತ್ತದೆ. ಇಷ್ಟೆಲ್ಲಾ ಗಾಬರಿ ಆಗೋದು ಬೇಡ, ಈಗಾಗಲೇ ಕ್ಯಾನ್ಸರ್ ಹೋಗಲಾಡಿಸೋಕೆ ನೂತನ ಟೆಕ್ನಾಲಜಿಗಳು ಇವೆ. ಆದರೆ ಚಿಕಿತ್ಸೆಗಿಂತ, ರೋಗ ಬಾರದಂತೆ ತಡೆಗಟ್ಟೋದು ಒಳ್ಳೆಯದೇ ಅಲ್ವಾ?

  • ಸ್ತನ ಕ್ಯಾನ್ಸರ್‌ನಿಂದ ಹೀಗೆ ದೂರ ಇರಿ..
  • ಆರೋಗ್ಯಕರ ತೂಕ ನಿಮ್ಮದಾಗಿರಲಿ. ಅತಿಯಾದ ತೂಕದಿಂದ ಒಂದು ಲಾಭವೂ ಇಲ್ಲ.
  • ದೈಹಿಕವಾಗಿ ಸಕ್ರಿಯರಾಗಿರಿ. ಕೂತಲ್ಲೇ ಕೂರುವುದು, ನಿಂತಲ್ಲೇ ನಿಲ್ಲುವುದು, ಸೋಂಬೇರಿತನ ಬೇಡ.
  • ಸೊಪ್ಪು, ಮೊಳಕೆ ಕಾಳು. ತರಕಾರಿ, ಹಣ್ಣುಗಳು ಎಲ್ಲವನ್ನೂ ತಿನ್ನಿ. ಜಂಕ್‌ಫುಡ್, ಮದ್ಯಪಾನ ಬೇಡ.
  • ಧೂಮಪಾನ ನಿಜ್ವಾಗಿಯೂ ಆರೋಗ್ಯಕ್ಕೆ ಹಾನಿಕರ. ಅದರಿಂದ ಒಂದಲ್ಲಾ ಒಂದು ಸಮಸ್ಯೆ ಗ್ಯಾರೆಂಟಿ.
  • ಬಾಣಂತಿಯರು ಸೌಂದರ್ಯದ ಬಗ್ಗೆ ಗಮನ ಹರಿಸದೆ ಎದೆಹಾಲು ಉಣಿಸಿ. ಇದರಿಂದ ಸ್ತನ ಕ್ಯಾನ್ಸರ್ ಚಾನ್ಸ್ ಕಡಿಮೆ.
  • ಬರ್ಥ್ ಕಂಟ್ರೋಲ್ ಮಾತ್ರೆಗಳ ಸೇವನೆ ಬೇಡ, ಅದರಲ್ಲೂ ನಿಮ್ಮ ವಯಸ್ಸು 35 ದಾಟಿದ್ದರೆ ಇದು ಹಾನಿಕಾರಕ.
  • ಹಾರ್ಮೋನ್‌ಗಳ ಏರಿಳಿತ ಹೆಚ್ಚು ಕಡಿಮೆ ಆಗದಂತೆ ಗಮನ ವಹಿಸಿ. ಇದರಿಂದಲೂ ಸಮಸ್ಯೆ ತಪ್ಪಿದ್ದಲ್ಲ.
  • ರೇಡಿಯೇಷನ್‌ಗಳಿಗೆ ಪದೇ ಪದೆ ಎಕ್ಸ್‌ಪೋಸ್ ಆಗಬೇಡಿ, ವಾತಾವರಣದ ಮಾಲಿನ್ಯದಿಂದಲೂ ದೂರ ಇರಿ.
  • ಸರಿಯಾದ ವ್ಯಾಯಾಮ, ನಿದ್ದೆ ಕಡ್ಡಾಯ

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!