ಕಾಸರಗೋಡು ಹೊಸದುರ್ಗ ರೈಲ್ವೆ ಹಳಿಯಲ್ಲಿ ಪಶ್ಚಿಮ ಬಂಗಾಳ ವಲಸಿಗರ ಶವ ಪತ್ತೆ

ಹೊಸದಿಗಂತ, ಮಂಗಳೂರು:

ಕಾಸರಗೋಡು ಜಿಲ್ಲೆಯ ಹೊಸದುರ್ಗ ರೈಲ್ವೆ ಹಳಿಯಲ್ಲಿ ವಲಸೆ ಕಾರ್ಮಿಕರಿಬ್ಬರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತಪಟ್ಟವರನ್ನು ಪ್ರಾಥಮಿಕ ತನಿಖೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಸಂತು ಮಾಲಿಕ್ (32) ಮತ್ತು ಫಾರೂಕ್ ಶೇಖ್ (23) ಎಂದು ಗುರುತಿಸಲಾಗಿದೆ. ಇವರು ಹೊಸದುರ್ಗ ಕೊಳವಯಲಿನ ಕ್ವಾಟರ್ಸ್‌ನಲ್ಲಿ ವಾಸವಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ವೃತ್ತಿ ನಡೆಸುತ್ತಿದ್ದರು. ಶವಗಳ ಪಕ್ಕದಲ್ಲಿಯೇ ಎಟಿಎಂ ಕಾರ್ಡ್ ಹಾಗೂ ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಹೊಸದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!