ಹೊಸದಿಗಂತ ವರದಿ ಉಡುಪಿ:
ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಐಸಿಸ್ ಉಗ್ರರ ನಂಟು ಶಂಕಿತ ಆರೋಪಿ ಮಾಜ್ ನ ತಂದೆ ಮುನೀರ್ ಅಹ್ಮದ್ (56) ಅವರ ಮೃತದೇಹವನ್ನು ಶುಕ್ರವಾರ ತಡರಾತ್ರಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಹೊನ್ನಾಳಕ್ಕೆ ತರಲಾಯಿತು.
ಹೊನ್ನಾಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸುಮಾರು ಒಂದು ತಾಸು ಶವದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಆಂಬುಲೆನ್ಸ್ ನಲ್ಲಿ ತೀರ್ಥಹಳ್ಳಿಗೆ ಶವ ರವಾನಿಸಲಾಯಿತು. ಬ್ರಹ್ಮಾವರ ಹೊನ್ನಾಳದಲ್ಲಿ ಮೃತ ಮುನೀರ್ ಅವರ ನಿಕಟ ಸಂಬಂಧಿಗಳು ವಾಸವಿರುವ ಮನೆ ಇದೆ.