ದಿನಭವಿಷ್ಯ | ಒಂದು ರಾಶಿಗೆ ಉಲ್ಲಾಸದ ದಿನ, ಮತ್ತೊಂದು ರಾಶಿಯವರ ಖಾಸಗಿ ಬದುಕಿನಲ್ಲಿ ಏರುಪೇರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ

ಉಲ್ಲಾಸದ ದಿನ. ಹಿನ್ನಡೆಗಳು ಇಂದು ಬಾಧಿಸಲಾರವು. ಖಾಸಗಿ ಬದುಕಿನಲ್ಲಿ ಹೊಸ ವ್ಯಕ್ತಿ ಪ್ರವೇಶವಾದೀತು. ಅವರಿಂದ ಹೆಚ್ಚು ಸಂತೋಷ ಕಾಣುವಿರಿ.

ವೃಷಭ
ಇತರರಿಗೆ ನೆರವು ನೀಡಬೇಕಾದ ಪ್ರಸಂಗ ಒದಗೀತು. ಆದರೆ ನಿಮಗೆ ಪ್ರತಿಕೂಲ ಪರಿಸ್ಥಿತಿ ಏರ್ಪಡದಂತೆ ನೋಡಿಕೊಳ್ಳಿ. ಕೌಟುಂಬಿಕ ಸಹಕಾರ.

ಮಿಥುನ
ನಿಮ್ಮ ಕೆಲಸಕ್ಕೆ ಒತ್ತಡ, ಉದ್ವಿಗ್ನತೆ ಅಡ್ಡಿ ತರುತ್ತದೆ. ಕೆಲವು ವಿಷಯಗಳಲ್ಲಿ ಗುರಿ ಸಾಧಿಸಲು ಹೊಂದಾಣಿಕೆಯ ಸ್ವಭಾವ ಒಳ್ಳೆಯದು.

ಕಟಕ
ಕೆಲಸದ ಒತ್ತಡದಲ್ಲಿ ನಿಮ್ಮ ಪ್ರೀತಿಪಾತ್ರರನ್ನು ಕಡೆಗಣಿಸದಿರಿ. ಅವರ ಬೇಕುಬೇಡಗಳಿಗೆ ಸ್ಪಂದಿಸಿರಿ. ಪ್ರತಿಕೂಲ ಸನ್ನಿವೇಶವನ್ನು ಜಾಣ್ಮೆ ಯಿಂದ ನಿಭಾಯಿಸಿ.

ಸಿಂಹ
ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು. ಆದರೆ ಅವರ ವಿರುದ್ಧ ತಿರುಗಿ ಬೀಳದೆ ವರ್ತಿಸುವುದೇ ನಿಮಗೆ ಹಿತಕಾರಿ. ಕೌಟುಂಬಿಕ ಒತ್ತಡ.

ಕನ್ಯಾ
ಖಾಸಗಿ ಬದುಕಿನಲ್ಲಿ ಏರುಪೇರು. ನಿಮ್ಮ ಯೋಜನೆ ಫಲಿಸದು. ಕೆಲವರು ನಿಷ್ಟುರ ಆಗಬಹುದು. ಸಹನೆಯಿಂದ ವರ್ತಿಸುವುದು ಲೇಸು.

ತುಲಾ
ಹೆಚ್ಚು ಜವಾಬ್ದಾರಿ. ಅದು ನಿಮ್ಮ ಕೆಲಸ ಕೆಡಿಸದಂತೆ ನೋಡಿಕೊಳ್ಳಿ. ನಿಮ್ಮ ಸ್ಥೈರ್ಯಗುಂದಿಸಲು ಕೆಲವರು ಯತ್ನಿಸುತ್ತಾರೆ. ಅದಕ್ಕೆ ಕಿವಿಗೊಡದಿರಿ.

ವೃಶ್ಚಿಕ
ಕೆಲಸದ ಒತ್ತಡ ಕುಟುಂಬದ ಮೇಲೂ ಪರಿಣಾಮ ಬೀರೀತು. ಕುಟುಂಬದ ಸದಸ್ಯರ ಜತೆ ಸಂಘರ್ಷ ಉಂಟಾದೀತು. ತಾಳ್ಮೆಯಿಂದ ವರ್ತಿಸಿ.

ಧನು
ದೀರ್ಘ ಕಾಲದ ಬಳಿಕ ನೀವು ನಿಮ್ಮ ಹಳೆಯ ಕಾರ್ಯಕ್ಕಾಗಿ ಇತರರ ಮೆಚ್ಚುಗೆ ಪಡೆಯುವಿರಿ. ನಿಮ್ಮನ್ನು ಹಿಂದೆ ಕಡೆಗಣಿಸಿದವರು ಈಗ ಹೊಗಳುವರು.

ಮಕರ
ಯಾವುದೇ ಕಾರ್ಯ ಆತುರದಿಂದ ಮಾಡಲು ಹೋಗದಿರಿ. ಎಲ್ಲದಕ್ಕೂ ಸೂಕ್ತ ಯೋಜನೆಯಿದ್ದರೆ ಒಳ್ಳೆಯದು. ಆಪ್ತರ ಸಲಹೆ ಸ್ವೀಕರಿಸಲು ಹಿಂಜರಿಕೆ ಬೇಡ.

ಕುಂಭ
ಸಂಬಂಧದಲ್ಲಿ ಸುಧಾರಣೆ. ಮನಸ್ತಾಪ ಅಂತ್ಯ. ಇತರರ ಮಾತುಗಳಿಗೆ ಉದ್ವಿಗ್ನಗೊಳ್ಳದಿರಿ. ಎಲ್ಲವನ್ನು ಶಾಂತಿಯಿಂದ ನಿಭಾಯಿಸಿ.

ಮೀನ
ನಿಮ್ಮ ಒತ್ತಡ ತಣಿಸುವ ಬೆಳವಣಿಗೆ ಸಂಭವಿಸುವುದು. ಮನಸ್ಸಿಗೆ ನಿರಾಳತೆ ಉಂಟಾಗಲಿದೆ. ಖಾಸಗಿ ಸಮಸ್ಯೆ ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!