ಹೊಸ ದಿಗಂತ ವರದಿ, ರಾಯಚೂರು
ನವಜಾತ ಶಿಶುವನ್ನು ರಟ್ಟಿನ ಪೆಟ್ಟಿಗೆಯಲ್ಲಿಟ್ಟು ಚರಂಡಿಗೆ ಎಸೆದ ಅಮಾನವೀಯ ಘಟನೆ ದೇವದುರ್ಗ ಪಟ್ಟಣದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಶಿಶು ಸಾವಿಗೀಡಾಗಿದೆ.
ಸಾರ್ವಜನಿಕರೇ ಚರಂಡಿಯಿಂದ ಶಿಶುವಿನ ಮೃತದೇಹ ತೆಗೆದರು. ಈ ಕೃತ್ಯಕ್ಕೆ ಕಾರಣರಾಗಿ ಪರಾರಿಯಾದವರಿಗೆ ಹಿಡಿಶಾಪ ಹಾಕಿದ ಜನರು, ತಾವೇ ಅದರ ಅಂತ್ಯಕ್ರಿಯೆ ಸಹ ನೆರವೇರಿಸಿದ್ದಾರೆ.