Monday, December 11, 2023

Latest Posts

ಊಟದಲ್ಲಿ ಸತ್ತ ಇಲಿ : ಹೊಟೇಲ್‌ಗೆ ಬೀಗ ಹಾಕಿಸಿದ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾವೇರಿಗಾಗಿ ನಿನ್ನೆ ಬೆಂಗಳೂರಿನಲ್ಲಿ ಬಂದ್ ನಡೆದಿದ್ದು, ಕರ್ತವ್ಯನಿರತ ಪೊಲೀಸರ ಆಹಾರದಲ್ಲಿ ಸತ್ತ ಇಲಿ ದೊರೆತಿದೆ. ಯಶವಂತಪುರ ಸಂಚಾರಿ ಠಾಣೆಯ ಪೊಲೀಸರಿಗೆ ಊಟದಲ್ಲಿ ಸತ್ತ ಇಲಿ ಸಿಕ್ಕಿದ್ದು, ಹೊಟೇಲ್‌ಗೆ ಬೀಗ ಹಾಕಿಸಲಾಗಿದೆ. ಹೊಟೇಲ್‌ಗಳೂ ಬಂದ್‌ಗೆ ಸಾಥ್ ನೀಡಿದ್ದು, ಆಯಾ ವಿಭಾಗದಿಂದ ಆಹಾರ ಪೂರೈಕೆ ಮಾಡಲಾಗಿದೆ.

ಒಟ್ಟಾರೆ 180  ಆಹಾರ ಪೊಟ್ಟಣಗಳನ್ನು ಪೂರೈಕೆ ಮಾಡಲಾಗಿದ್ದು, ಒಂದು ಪೊಟ್ಟಣದಲ್ಲಿ ಸತ್ತ ಇಲಿ ಸಿಕ್ಕಿದೆ, ಉಳಿದ ಪೊಟ್ಟಣಗಳನ್ನು ತಿಂದವರಲ್ಲಿಯೂ ಅನಾರೋಗ್ಯ ಬಾಧಿಸಿದ್ದು, ಊಟ ವಾಪಾಸ್ ಕಳಿಸಲಾಗಿದೆ. ಆಹಾರ ಪೂರೈಕೆ ಹೊಣೆ ಹೊತ್ತಿದ್ದ ಇನ್ಸ್‌ಪೆಕ್ಟರ್‌ಗಳಿಗೆ ನೊಟೀಸ್ ನೀಡಲಾಗಿದ್ದು, ಹೊಟೇಲ್‌ಗೆ ಬೀಗ ಹಾಕಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!