ಹೊಸದಿಗಂತ ವರದಿ,ಮೈಸೂರು:
ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಪೋಲೀಸ್ ಪೇದೆಯ ವಿರುದ್ಧ ಆತನ ಪ್ರಿಯತಮೆ ಪೊಲೀಸ್ ಠಾಣೆಯ ಮುಂದೆ ನ್ಯಾಯಾಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ
ಮೈಸೂರಿನ ತಿ.ನರಸೀಪುರ ಪೋಲೀಸ್ ಠಾಣೆ ಮುಂದೆ ನಡೆದಿದೆ. ಬೆಂಗಳೂರಿನ ಕದ್ರೆನಹಳ್ಳಿ ನಿವಾಸಿ ಸವಿತಾ ಎಂಬಾಕೆ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಯುವತಿ.
ಈಕೆ ಹಾಗೂ ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ರವಿ ನಡುವೆ 2018 ರಲ್ಲಿ ಫೇಸ್ಬುಕ್ ಮೂಲಕ ಸ್ನೇಹ ಶುರುವಾಗಿ ಬಳಿಕ ಪ್ರೇಮಕ್ಕೆ ತಿರುಗಿತ್ತು. ನನ್ನನ್ನು ದೈಹಿಕವಾಗಿ ಬಳಸಿಕೊಂಡ ರವಿ, ನಂತರ ಮದುವೆಯಾಗದೆ ಕೈಕೊಟ್ಟಿದ್ದಾನೆ. ಹಾಗಾಗಿ ನನಗೆ ನ್ಯಾಯ ದೊರಕಿಸಿಕೊಡಿ ತಿ.ನರಸೀಪುರ ಪೋಲೀಸ್ ಠಾಣೆ ಮುಂಭಾಗ ಸಂತ್ರಸ್ತ ಯುವತಿ ಏಕಾಂಗಿ ಪ್ರತಿಭಟನೆ ನಡೆಸಿದಳು.