ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವತಿಯೊಬ್ಬಳು ರೀಲ್ಸ್ಗಾಗಿ ಕಾರು ಚಲಾವಣೆ ಮಾಡಲು ಹೋಗಿ ಆಕ್ಸಿಲರೇಟರ್ ಒತ್ತಿದ ಪರಿಣಾಮ ಕಾರು ರಿವರ್ಸ್ ಹೋಗಿ ಪ್ರಪಾತಕ್ಕೆ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಔರಂಗಬಾದ್ನಲ್ಲಿ ನಡೆದಿದೆ.
ಶ್ವೇತಾ ಸುರ್ವಾಸೆ ಮತ್ತು ಆಕೆಯ ಸ್ನೇಹಿತ ಹನುಮಾನ್ ನಗರದ ನಿವಾಸಿ ಸೂರಜ್ ಸಂಜಯ್ ಮುಳೆ (25) ಮಧ್ಯಾಹ್ನ ಔರಂಗಾಬಾದ್ನಿಂದ ಟೊಯೊಟಾ ಎಟಿಯೋಸ್ ಕಾರಿನಲ್ಲಿ ಖುಲ್ತಾಬಾದ್ ತಾಲೂಕಿನ ಸುಲಿಭಂಜನ್ನಲ್ಲಿರುವ ದತ್ತ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶ್ವೇತಾ ಮೊಬೈಲ್ ರೀಲ್ಸ್ಗಾಗಿ ಕಾರು ಓಡಿಸುತ್ತೇನೆ ಎಂದು ಸ್ನೇಹಿತನಿಗೆ ಹೇಳಿದಳು.
ಇದಕ್ಕೆ ಒಪ್ಪಿದ ಸ್ನೇಹಿತ ವಿಡಿಯೋ ಚಿತ್ರೀಕರಿಸುತ್ತಿದ್ದ. ಇತ್ತ ಶ್ವೇತಾ ಡ್ರೈವಿಂಗ್ ಮಾಡಲು ಹೋಗಿ ಕಾರು ರಿವರ್ಸ್ ಗೇರ್ನಲ್ಲಿದ್ದಾಗ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದಾಳೆ. ಈ ಪರಿಣಾಮ ಕಾರು ಹಿಂದಕ್ಕೆ ಹೋಗಿ ಪ್ರಪಾತಕ್ಕೆ ಬಿದ್ದಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು.