ಶ್ರೀಲಂಕಾ ನೌಕಾಪಡೆಯ ನಾವಿಕ ಸಾವು: 10 ಭಾರತೀಯ ಮೀನುಗಾರರ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಅಕ್ರಮ ಮೀನುಗಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧನವಾಗಿರುವ 10 ಭಾರತೀಯ ಮೀನುಗಾರರ ವಿರುದ್ಧ ನೌಕಾಪಡೆಯ ನಾವಿಕ ಹತ್ಯೆ ಪ್ರಕರಣ ದಾಖಲಿಸಲಾಗಿದೆ.

ಸೋಮವಾರವಷ್ಟೇ ಈ ಮೀನುಗಾರರನ್ನು ಅಕ್ರಮ ಮೀನುಗಾರಿಕೆ ಆರೋಪದಲ್ಲಿ ಅರೆಸ್ಟ್‌ ಮಾಡಲಾಗಿದೆ. ಅವರ ದೋಣಿಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ವೇಳೆ ನೌಕಾಪಡೆ ನಾವಿಕ ಸಾವನ್ನಪ್ಪಿದ್ದರು. ಇದೀಗ ಇದೇ ಪ್ರಕರಣವನ್ನು ಮೀನುಗಾರರ ವಿರುದ್ಧ ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ.

ಮೀನುಗಾರರ ದೋಣಿ ವಶಕ್ಕೆ ಪಡೆಯುವ ಕಾರ್ಯಾಚರಣೆ ವೇಳೆ ನೌಕಾಪಡೆಯ ವಿಶೇಷ ಬೋಟ್ ಸ್ಕ್ವಾಡ್ರನ್‌ನ ಹಿರಿಯ ನಾವಿಕ ಗಂಭಿರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅರೆಸ್ಟ್‌ ಆಗಿರುವ ಮೀನುಗಾರರನ್ನು ಕಂಕೆಸಂತುರೈ ಬಂದರಿಗೆ ಕರೆ ತರಲಾಗಿದ್ದು, ಮೈಲಾಡಿ ಮೀನುಗಾರರ ಇನ್ಸ್‌ಪೆಕ್ಟರ್‌ಗೆ ವಶಕ್ಕೆ ಒಪ್ಪಿಸಲಾಗಿದೆ. ಇನ್ನು ಜಾಫ್ನಾದಲ್ಲಿರುವ ಮಲ್ಲಕಂ ಕೋರ್ಟ್‌ನಲ್ಲಿ ಬಿ ರಿಪೋರ್ಟ್‌ ದಾಖಲಿಸಲಾಗಿದೆ.

ಮೃತ ನಾವಿಕನ ಮರಣೋತ್ತರ ಪರೀಕ್ಷೆಯನ್ನು ಜಾಫ್ನಾ ಮ್ಯಾಜಿಸ್ಟ್ರೇಟ್ ನಡೆಸಿದರು. ನಾವಿಕನ ಸಾವು ಅಪಘಾತವಾಗಿದ್ದು, ಬೆನ್ನುಹುರಿಗೆ ಹಾನಿಯಾಗಿದೆ ಎಂದು ಪರೀಕ್ಷೆಯಲ್ಲಿ ಬಯಲಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!