ಪಾಕಿಸ್ತಾನ ಬಾಂಬ್‌ ಸ್ಫೋಟ: ಸಾವಿನ ಸಂಖ್ಯೆ 42ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ಭಾನುವಾರ ಸಂಭವಿಸಿದ ಬಜೌರ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿದ್ದು, 1,122ಜನರನ್ನು ರಕ್ಷಣೆ ಮಾಡಲಾಗಿದೆ. ಖೈಬರ್ ಪಖ್ತುಂಖ್ವಾದ ಬಜೌರ್‌ನ ಖಾರ್ ತಹಸಿಲ್‌ನಲ್ಲಿ ಸಂಭವಿಸಿದ ಸ್ಫೋಟವು ಜಮಿಯತ್ ಉಲೇಮಾ-ಎ-ಇಸ್ಲಾಂ ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶವನ್ನು ಗುರಿಯಾಗಿಸಿಯಾಗಿಸಿದೆ.

ರಕ್ಷಣಾ ಕಾರ್ಯಕರ್ತರು ಹಾಗೂ ಪೊಲೀಸ್‌ ಸಿಬ್ಬಂದಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದರು. ಜೆಯುಐ-ಎಫ್ ನಾಯಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಈ ಮಾರಣಾಂತಿಕ ಘಟನೆ ನಡೆದಿದೆ.
ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಅಖ್ತರ್ ಹಯಾತ್ ಖಾನ್ ಪ್ರಕಾರ, ಸ್ಫೋಟವು ಆತ್ಮಹತ್ಯಾ ದಾಳಿಯಾಗಿದ್ದು, ಸ್ಫೋಟಕ್ಕೆ 10 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಹೇಳಿದರು.

ಸ್ಫೋಟದ ಸ್ಥಳದಿಂದ ತನಿಖಾ ತಂಡಗಳು ಪುರಾವೆಗಳನ್ನು ಸಂಗ್ರಹಿಸುತ್ತಿವೆ. ಏತನ್ಮಧ್ಯೆ,  ಪೇಶಾವರವನ್ನು ಅಲರ್ಟ್‌ನಲ್ಲಿ ಇರಿಸಲಾಗಿದೆ ಮತ್ತು ಭದ್ರತಾ ಪಡೆಗಳು ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಭೀಕರ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಜೆಯುಐ-ಎಫ್ ಮುಖ್ಯಸ್ಥ ಫಜಲ್ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!