Friday, September 29, 2023

Latest Posts

ಮೊರಾಕೊ ಭೂಕಂಪ: ಸಾವನ್ನಪ್ಪಿದವರ ಸಂಖ್ಯೆ 2,800ಕ್ಕೆ ಏರಿಕೆ, ಮುಂದುವರೆದ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊರಾಕೊದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 2800ಕ್ಕೆ ಏರಿಕೆಯಾಗಿದ್ದು, 2500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೊರಾಕೊದ ಮುರಕೇಶ್‌ನಲ್ಲಿ ಶುಕ್ರವಾರ (ಸೆಪ್ಟೆಂಬರ್ 8) ತಡರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಈ ದುರಂತದಲ್ಲಿ 2,862 ಮಂದಿ ಸಾವನ್ನಪ್ಪಿದ್ದು, 2,562 ಜನ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬದುಕುಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ಭೂಕಂಪದಿಂದಾಗಿ ಟಿನ್ಮೆಲ್ ಗ್ರಾಮದಲ್ಲಿ ಪ್ರತಿಯೊಂದು ಮನೆಯೂ ನೆಲಸಮವಾಗಿದೆ ಮತ್ತು ಇಡೀ ಸಮುದಾಯವು ನಿರಾಶ್ರಿತರಾಗಿದ್ದಾರೆ. ಈ ಪ್ರದೇಶದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳಿಂದ ದುರ್ವಾಸನೆ ಹರಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!