ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಹಿಂದೆಂದೂ ಕಾಣದಂತ ಭೀಕರ ಭೂಕಂಪ ಸಂಭವಿಸಿದ್ದು, ಈವರೆಗೂ ಬರೋಬ್ಬರಿ 4,000 ಮಂದಿ ಮೃತಪಟ್ಟಿದ್ದಾರೆ.
6.2 ತೀವ್ರತೆಯಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದ್ದು, 2,000 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅಫ್ಘಾನ್ ನೆಲವನ್ನು ಬಗೆದಷ್ಟೂ ಮೃತದೇಹಗಳು ಕಾಣಿಸುತ್ತಲೇ ಇವೆ.
ಹೆರಾತ್‌ನ ಜಿಂದಾಜನ್ ಜಿಲ್ಲೆಯ 13 ಹಳ್ಳಿಗಳು ನೆಲಸಮವಾಗಿದ್ದು, ಹೆಚ್ಚಿನ ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ. 13 ಹಳ್ಳಿಗಳಲ್ಲಿ ಒಟ್ಟಾರೆ 1,300 ಮನೆಗಳು ನೆಲಸಮವಾಗಿದೆ.
ಹೆಣಗಳ ರಾಶಿಯೇ ರಸ್ತೆಯಲ್ಲಿ ಬಿದ್ದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.