ಮನೆಗೆ ಬೀಗ ಹಾಕಿದ ಸಾಲ ವಸೂಲಾತಿ ಏಜೆಂಟ್ಸ್‌, ಮನನೊಂದು ರೈಲಿಗೆ ತಲೆಕೊಟ್ಟ ಟೆಕ್ಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಲ ವಸೂಲಾತಿ ಏಜೆಂಟರು ಮತ್ತು ಪ್ರಮುಖ ಬ್ಯಾಂಕ್‌ನ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ 40 ವರ್ಷದ  ನಿರುದ್ಯೋಗಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.

ಆನೇಕಲ್ ರೈಲು ನಿಲ್ದಾಣದ ಬಳಿ ಇರುವ ಗೌರಿಶಂಕರ್ ಶರ್ಮಾ ಅವರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಸಾಲ ವಸೂಲಾತಿ ಏಜೆಂಟರು 18 ತಿಂಗಳಿಂದ ಕಂತುಗಳನ್ನು ಪಾವತಿಸದ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಅವರ ಸೋದರ ಮಾವ ಬಿಹಾರದ ಉದ್ಯಮಿ ರಾಜೀವ್ ರಾಜನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಗೌರಿ ಶಂಕರ್ ಶರ್ಮಾ ಸಾವಿಗೆ ಬ್ಯಾಂಕ್‌ನ ಸಹಾಯಕ ಉಪಾಧ್ಯಕ್ಷ, ಗೃಹ ಸಾಲ ವಿಭಾಗದ ರಾಕೇಶ್ ಕುಮಾರ್ ಸಿನ್ಹಾ ಮತ್ತು ಸಿಬ್ಬಂದಿ ಪ್ರಸನ್ನ ಸಿ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶರ್ಮಾ ಶುಕ್ರವಾರಮೃತಪಟ್ಟಿದ್ದರೂ, ಸೋಮವಾರ ಅವರ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ, ಗುರುವಾರ  ಘಟನೆ ಬೆಳಕಿಗೆ ಬಂದಿದೆ.

ಅವರ ಪತ್ನಿ, ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ, ಪತ್ನಿ ಸೇರಿದಂತೆ ಅವರ ಕುಟುಂಬದಲ್ಲಿ ಯಾರಿಗೂ ಅವರ ಹಣಕಾಸಿನ ಸಮಸ್ಯೆಗಳ ಬಗ್ಗೆ ತಿಳಿದಿರಲಿಲ್ಲ. ಬಿಹಾರ ಮೂಲದ ಶರ್ಮಾ ಅವರು 12 ವರ್ಷಗಳಿಂದ ಬೆಂಗಳೂರಿನ ಸೀಮೆನ್ಸ್ ಟೆಕ್ನಾಲಜೀಸ್‌ನಲ್ಲಿ ಹಿರಿಯ ಹುದ್ದೆಯಲ್ಲಿ ಉದ್ಯೋಗಿಯಾಗಿದ್ದರು. ಅವರು 2019 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ವೇಳೆ ಇತರ ಕೆಲವರೊಂದಿಗೆ ವಜಾಗೊಳಿಸಲ್ಪಟ್ಟರು, ಅದಾದ ನಂತರ ಅವರು ಉದ್ಯೋಗ ಹುಡುಕಲು ಹೆಣಗಾಡುತ್ತಿದ್ದರು. ಆನೇಕಲ್-ಚಂದಾಪುರ ರಸ್ತೆಯಲ್ಲಿರುವ ಬೃಹತ್ ವಸತಿ ಸಂಕೀರ್ಣದಲ್ಲಿ ತಮ್ಮ ಕುಟುಂಬದೊಂದಿಗೆ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

ಹೆಚ್ಚಿನ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!