ಮೃತ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಐಡಿ ಕಾರ್ಡ್ ದುರ್ಬಳಕೆ: ಖತರ್ನಾಕ್​ ಕಳ್ಳರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಈ ವೇಳೆ ಬೆಂಗಳೂರು ನಗರ ಪೊಲೀಸರ ಪರವಾಗಿ ಟ್ರಾಫಿಕ್ ದಂಡ ವಸೂಲಿ ಮಾಡುತ್ತಿದ್ದ ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈಶಾನ್ಯ ಸೈಬರ್ ಕ್ರೈಂ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ, ಇಸ್ಮಾಯಿಲ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಬಂಧಿತರು.

ಈ ಶಂಕಿತರ ಅಪಾಯಕಾರಿ ಯೋಜನೆಗಳಿಂದ ಪೊಲೀಸರು ಶಾಕ್ ಆಗಿದ್ದಾರೆ. ಹೌದು, ಮೃತ ಪೊಲೀಸ್ ಅಧಿಕಾರಿಯ ಐಡಿ ಬಳಸಿ ಟ್ರಾಫಿಕ್ ಫೈನ್ ಆ್ಯಪ್ ಹಾಗೂ ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಚಾಲಕನ ವಿವರಗಳನ್ನು ಪಡೆದುಕೊಂಡು, ನಂತರ ನಕಲಿ ಐಡಿಯನ್ನು ಬಳಸಿ , ಟ್ರಾಫಿಕ್ ಪೊಲೀಸ್ ಎಂದು ಐಡಿ ಕಾರ್ಡ್ ಕಳಿಸಿ, ಬಳಿಕ ಯುಪಿಐ ಐಡಿ ಕಳಿಸಿ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು.

ವಿಷಯ ತಿಳಿದ ನಂತರ ಮೃತ ಪೊಲೀಸ್ ಅಧಿಕಾರಿಯ ಮಗಳು ಈಶಾನ್ಯ ಜಿಲ್ಲಾ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!