ಚಿಕ್ಕೋಡಿ ಜಿಲ್ಲೆ ರಚನೆಗಾಗಿ ಹೋರಾಟ ನಡೆಸಲು ತೀರ್ಮಾನ

ಚಿಕ್ಕೋಡಿ, ಹೊಸದಿಗಂತ ವರದಿ
ಚಿಕ್ಕೋಡಿ ಜಿಲ್ಲೆ ರಚನೆಗಾಗಿ ಸರ್ಕಾರದ ವಿರುದ್ದ ಸಂವಿಧಾನಾತ್ಮಕ ಹೋರಾಟ ನಡೆಸುತ್ತೇವೆ. ನ್ಯಾಯಾಲಯದಲ್ಲಿ ಹೋರಾಡುವ ಮೂಲಕವೇ ಚಿಕ್ಕೊಡಿ ಜಿಲ್ಲಾ ರಚನೆ ಬೇಡಿಕೆ ಈಡೇರಿಸಿಕೊಳ್ಳಲಾಗುವುದು ಎಂದು ಪಟ್ಟಣದ ಐಎಎಮ್ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಚಿಕ್ಕೋಡಿ ಜಿಲ್ಲೆಗಾಗಿ ರಾಜ್ಯ ಸರಕಾರಕ್ಕೆ ಹಕ್ಕೋತ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನ್ಯಾಯಾಂಗ ಹೋರಾಟದ ಖರ್ಚು ವೆಚ್ಚಗಳನ್ನು ಸ್ವತಃ ತಾವೇ  ಭರಿಸಿಕೊಂಡು ನಾಯಾಲಯದಲ್ಲಿ ಹೋರಾಡುವದಾಗಿ ಖ್ಯಾತ ನ್ಯಾಯವಾದಿ ಎಂ.ಬಿ ಪಾಟೀಲ ಹೇಳಿದರು. ನ್ಯಾಯಾಲಯಕ್ಕೆ ಈ ಕುರಿತು ಪಿಐಎಲ್‌ ಸಲ್ಲಿಸುವುದಾಗಿ ರಾಯಭಾಗ ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಆರ್ ಎಚ್ ಗುಡ್ಡೆ ಅವರು ತಿಳಿಸಿದರು.
ಚಿಂಚನಿ ಅಲ್ಲಮಪ್ರಭು ಶ್ರೀ ಹಾಗೂ ಚಿಕ್ಕೋಡಿ ಸಂಪಾದನ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿದ್ದರು.
ಕಡು ಬಡ ಕುಟುಂಬದಿಂದ ಬಂದು ಸಾಧನೆಯ ಶಿಖರವೇರಿರುವ ಎರ್ ಪೋರ್ಸ್ ಪೈಲೇಟ್ ತನುಶ್ರೀ ಸುತಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಕಾಶಿನಾಥ ಕುರಣೆ, ಖ್ಯಾತ ವೈದ್ಯ ಎನ್.ಎ ಮಗದುಮ್, ಚಿಕ್ಕೋಡಿ ಪತ್ರಕರ್ತ ಸಂಘದ ಅದ್ಯಕ್ಷ ರಾಜೇಂದ್ರ ಕೋಳಿ,ಹಿರಿಯ ಪತ್ರಕರ್ತ ಕವಟಗಿ, ರವಿ ಹಂಪನ್ನವರ,ಚಂದ್ರಕಾಂತ ಹುಕ್ಕೇರಿ, ಕರವೆ ಮುಖಂಡ ಸಂಜು ಬಡಿಗೇರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!