ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಸರ್ಕಾರ ಗೋಮಾತೆಯನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿದ್ದು, ಈ ನಿರ್ಧಾರ ಸ್ವಾಗತಾರ್ಹ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಗೋವನ್ನು ರಾಜ್ಯ ಮಾತೆ ಅಥವಾ ಕ್ಷೀರ ಮಾತೆ ಎಂದು ಘೋಷಿಸುವಂತೆ ಅವರು ಒತ್ತಾಯಿಸಿದ್ದಾರೆ.
ನಂದಿನಿ ಉತ್ಪನ್ನಗಳ ಮೂಲಕ ಕರ್ನಾಟಕ ವಿಶ್ವ ಮಾನ್ಯತೆ ಪಡೆಯುತ್ತಿದೆ. ನಂದಿನಿ ಉತ್ಪನ್ನಗಳ ಧಾತೆ ಗೋ ಮಾತೆ. ಆದ್ದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋವನ್ನು ರಾಜ್ಯ ಮಾತೆ ಎಂದೇ ಘೋಷಿಸಲಿ ಇಲ್ಲವೇ ‘ಕ್ಷೀರಮಾತೆ’ ಎಂದು ಘೋಷಿಸಲಿ ಎಂದು ಬಿ.ವೈ. ವಿಜಯೇಂದ್ರ. ಒತ್ತಾಯಿಸಿದ್ದಾರೆ.