ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರು ಅಂಗಾಂಗ ದಾನಕ್ಕೆ ಹಿಂದೇಟು ಹಾಕುತ್ತಿದ್ದು, ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ರಾಜ್ಯ ಕುಸಿದಿದೆ.
ಅಂಗಾಂಗ ದಾನದ ಬಗ್ಗೆ ವೈದ್ಯರು ಜನರಿಗೆ ಸಾಕಷ್ಟು ಅರಿವು ಮೂಡಿಸುತ್ತಿದ್ದಾರೆ. ಸರ್ಕಾರ ಕೂಡ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಇಷ್ಟಾದರೂ ಮೂಢನಂಬಿಕೆಗಳು ಅಡ್ಡಿ ಉಂಟು ಮಾಡುತ್ತಿವೆ.
ಈ ಜನ್ಮದಲ್ಲಿ ಕಣ್ಣು, ಕಿಡ್ನಿ, ಚರ್ಮ, ಲಿವರ್, ಹೃದಯ, ಕರುಳು ಹೀಗೆ ಅಂಗಾಂಗಳನ್ನು ನೀಡಿದರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯತೆ ಕಾಡುತ್ತದೆ ಎಂಬ ಮಾತನ್ನು ನಂಬಿ ಜನರು ಅಂಗಾಂಗ ದಾನದಿಂದ ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಕಳೆದ ಎರಡು ವರ್ಷಗಳಿಂದ ಅಂಗಾಂಗ ದಾನ ಶೇ 30ರಷ್ಟು ಕರ್ನಾಟಕದಲ್ಲಿ ಕುಸಿತ ಕಂಡಿದೆ.