ದೇಶದಲ್ಲಿ ಹಿಂದುಗಳ ಜನಸಂಖ್ಯೆಯಲ್ಲಿ ಕುಸಿತ: ಸಮೀಕ್ಷಾ ವರದಿಯಿಂದ ಮಾಹಿತಿ ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಚುನಾವಣೆಯ ಕಾವು ಏರುತ್ತಿದ್ದು, ಇದರ ನಡುವೆ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ಸಮೀಕ್ಷೆ ಒಂದು ನಡೆಸಿದ್ದು, ಅದರ ಆಧಾರದಲ್ಲಿ ದೇಶದಲ್ಲಿ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಕುಸಿತಕಂಡಿದೆ. ಹಿಂದುಗಳ ಜನಸಂಖ್ಯೆ ಶೇ.7.82ರಷ್ಟು ಇಳಿಕೆ ಎಂದು ವರದಿ ಹೇಳಿದೆ.

ಇದೇ ವೇಳೆ ಮುಸ್ಲಿಮರ ಜನಸಂಖ್ಯೆ ಶೇಕಡಾ 43.15ರಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಇದೀಗ ಮುಸ್ಲಿಮರ ಜನಸಂಖ್ಯೆ ಶೇಕಡಾ 14.09ರಷ್ಟಾಗಿದೆ. ಇದೇ ವೇಳೆ ಮುಸ್ಲಿಮೇತರ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.6.58ರಷ್ಟು ಹೆಚ್ಚಳ ಎಂದು ವರದಿ ಹೇಳಿದೆ.

ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಹಿಂದುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಮುಸ್ಲಿಮ್ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ವರದಿಯಲ್ಲಿ ಏನಿದೆ?
1950ರಲ್ಲಿ ಶೇ.84.68ರಷ್ಟಿದ್ದ ಹಿಂದುಗಳ ಜನಸಂಖ್ಯೆ ಇದೀಗ ಶೇ.78.06 ಇಳಿಕೆಯಾಗಿದೆ. ಆದರೆ ಶೇಕಡಾ 9.84 ರಷ್ಟಿದ್ದ ಮುಸ್ಲಿಮರ ಜನಸಂಖ್ಯೆ ಶೇ.14.09ಕ್ಕೆ ಏರಿಕೆಯಾಗಿದೆ. ಅಂದರೆ ಹಿಂದುಗಳ ಜನಸಂಖ್ಯೆಯಲ್ಲಿ ಶೇಕಡಾ 7.82ರಷ್ಟು ಕುಸಿತ ಕಂಡಿದ್ದರೆ, ಮುಸ್ಲಿಮ್ ಜನಸಂಖ್ಯೆಯಲ್ಲಿ ಶೇಕಡಾ 43.15ರಷ್ಟು ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯಿಂದ ವರದಿ ಬಿಡುಗಡೆ ಮಾಡಿದೆ.

ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ವರದಿ ಬಿಡುಗಡೆಯಾಗಿದ್ದ ಇದೀಗ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್ ಒಲೈಕೆ ರಾಜಕಾರಣದಿಂದ ಹಿಂದುಗಳ ಸಂಖ್ಯೆ ಇಳಿಕೆಯಾಗಿದ್ದರೆ, ಮುಸ್ಲಿಮರ ಸಂಖ್ಯೆ ಏರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇತ್ತ ಕಾಂಗ್ರೆಸ್ ನರೇಂದ್ರ ಮೋದಿ ದೇಶದಲ್ಲಿ ವಿಭಜನೆ ರಾಜಕೀಯ ಮಾಡುತ್ತಿದ್ದಾರೆ. ‘ಬೆಲೆ ಏರಿಕೆ ಮತ್ತು ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ಮಾತಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ಮಾಹಿತಿ ಬಹಿರಂಗ ಯಾಕೆ ಎಂದಸ್ ಪ್ರಶ್ನಿಸಿದೆ. ಹಿಂದು-ಮುಸ್ಲಿಂ ಎಂದು ಧರ್ಮದ ಆಧಾರದ ಮೇಲೆ ದೇಶ ಒಡೆಯಲಾಗುತ್ತಿದೆ. ಇದು ದೇಶಕ್ಕೆ ಅಪಾಯ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!