ಚೀನಾದಿಂದ ಭಾರತದ ಆಮದುಗಳ ಪ್ರಮಾಣದಲ್ಲಿ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನವೆಂಬರ್‌ 2022ರಲ್ಲಿ ಚೀನಾದಿಂದ ಭಾರತಕ್ಕೆ ಆಮದುಗಳ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 5.42 ಶೇಕಡಾದಷ್ಟು ಕಡಿಮೆಯಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ವಾಣಿಜ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2021ರ ನವೆಂಬರ್‌ ತಿಂಗಳಲ್ಲಿ ಚೀನಾದಿಂದ ಆಮದುಗಳ ಪ್ರಮಾಣ 8.08 ಶತಕೋಟಿ ಡಾಲರ್‌ ಗಳಷ್ಟಿತ್ತು. ಇದು 2022ರ ನವೆಂಬರ್‌ ತಿಂಗಳಲ್ಲಿ 7.65 ಶತಕೋಟಿ ಡಾಳರ್‌ ಗೆ ಕುಸಿದಿದೆ. ವೈಯಕ್ತಿಕ ಕಂಪ್ಯೂಟರ್‌ಗಳು (ಲ್ಯಾಪ್‌ಟಾಪ್‌ಗಳು, ಪಾಮ್‌ಟಾಪ್‌ಗಳು ಇತ್ಯಾದಿ), ಯೂರಿಯಾ ಮತ್ತು ಡೈಅಮೋನಿಯಂ ಫಾಸ್ಫೇಟ್ ಮುಂತಾದ ಕೆಲ ಪ್ರಮುಖ ವಸ್ತುಗಳ ಆಮದಿನಲ್ಲಿ ಕುಸಿತವುಂಟಾಗಿದೆ.

ವರದಿಯ ಪ್ರಕಾರ, 2022-23ರ ಹಣಕಾಸು ವರ್ಷದಲ್ಲಿ ಆಮದಿನಲ್ಲಿನ ಕುಸಿತ ದಾಖಲಾಗಿರುವ ಎರಡನೇ ತಿಂಗಳು ಇದಾಗಿದ್ದು ಈ ಹಿಂದೆ ಅಕ್ಟೋಬರ್‌ ತಿಂಗಳಿನಲ್ಲಿ ಕುಸಿತ ದಾಖಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!