ಹೊಂಬುಜ ಮಠಕ್ಕೆ ಸ್ವರ್ಣ ಪಲ್ಲಕ್ಕಿ ಸಮರ್ಪಣೆ

ಹೊಸದಿಗಂತ ವರದಿ,ಶಿವಮೊಗ್ಗ:

ರಿಪ್ಪನ್‌ಪೇಟೆ ಸಮೀಪದ ಹೊಂಬುಜದ ಅತಿಶಯ ಜೈನ ಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಮ್ಮುಖದಲ್ಲಿ ಪದ್ಮಾವತಿ ದೇವಿ ಸನ್ನಿಧಿಗೆ  ಭಕ್ತರೊಬ್ಬರು ಸ್ವರ್ಣ ಪಲ್ಲಕ್ಕಿಯನ್ನು ಸಮರ್ಪಿಸಿದರು.
ಚನ್ನೈ ಮೂಲದ ಭಕ್ತರಾದ ಕಮಲ್ ತೋಪಡಿಯಾ ಜೈನ್ ಮತ್ತು ನಿಶಿ ಜೈನ್ ದಂಪತಿಗಳು  ಪದ್ಮಾವತಿ ದೇವಿಯ ವಿಶೇಷ ಪೂಜಾ ಸಂದರ್ಭದಲ್ಲಿ ಉತ್ಸವ ಮೂರ್ತಿಯ ಪ್ರದಕ್ಷಿಣೆಗಾಗಿ ಸ್ವರ್ಣ ಪಲ್ಲಕ್ಕಿಯನ್ನು ಸಮರ್ಪಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಠಕ್ಕಾಗಮಿಸಿದ್ದಾಗ ಈ ಕ್ಷೇತ್ರದ ಸ್ವಾಮಿ ಪಾರ್ಶ್ವನಾಥ ಮತ್ತು ಯಕ್ಷಿ ಪದ್ಮಾವತಿ ದೇವಿಯ ಪೂಜೆಯನ್ನು ನೇರವೇರಿಸಿದಾಗ ಈ ಕ್ಷೇತ್ರಕ್ಕೆ ಏನಾದರೂ ದಾನವಾಗಿ ನೀಡಬೇಕೆಂಬ ಬಯಕೆ ಮನಸ್ಸಿನಲ್ಲಿ ಮೂಡಿತು. ಅಂತೆಯೇ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡಾಗ ಸಂಪ್ರದಾಯಿಕ ಮರದ ಪಲ್ಲಕ್ಕಿಯು ಹಳೆಯದಾಗಿದ್ದು  ಹೊಸತನ್ನು ಮಾಡಿ ಕೊಡಬಹುದು ಎಂದು ತಿಳಿಸಿದರು. ಆಗಲೇ ನಾನು ಸಂಕಲ್ಪ ಮಾಡಿದ್ದೆ. ಶ್ರೀಕ್ಷೇತ್ರದ ಭಕ್ತನಾದ ನಾನು ಶ್ರವಣ ಬೆಳಗೊಳ, ಶಿಕರ್ಜಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಕೈಲಾದ ದಾನವನ್ನು ಮಾಡಿದ್ದು ಇಲ್ಲಿಯೂ ಅದನ್ನು ಮುಂದುವರೆಸಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!