ಹೊಸ ದಿಗಂತ ವರದಿ,ರಾಯಚೂರು :
ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಯವರ ೩೫೩ನೇ ಆರಾಧನಾ ಮಹೋತ್ಸವಕ್ಕೆ ತಿರುಪತಿಯ ತಿರುಮಲ ದೇವಸ್ಥಾನದಿಂದ ಟಿಟಿಡಿ ಇಒ ಜೆ.ಶ್ಯಾಮಲಾ ರಾವ್ ತರಲಾಗಿದ್ದ ಶ್ರೀವಾರಿ ವಸ್ತ್ರವನ್ನು ಮಂತ್ರಾಲಯದ ಮಠ ಸ್ವಾಮೀಜಿ ಸುಬುಧೇಂದ್ರ ಸ್ವಾಮೀಜಿಯವರಿಗೆ ಅರ್ಪಿಸಿದರು.
ಮಂತ್ರಾಲಯದ ಮಠದಲ್ಲಿ ಆರಂಭವಾಗಿರುವ ಸಪ್ತರಾತ್ರೋತ್ಸವದ ಮೊದಲ ದಿನ ಭಾನುವಾರದಂದು ಟಿಟಿಡಿ ಇಒ ಜೆ.ಶ್ಯಾಮಲಾ ರಾವ್ ಅವರು ಟಿಟಿಡಿಯಿಂದ ತಂದ ಶ್ರೀವಾರಿ ವಸ್ತ್ರವನ್ನು ಶ್ರೀ ಮಠದ ಅಧಿಕಾರಿಗಳು ಮತ್ತು ಪಂಡಿತರು ವಾದ್ಯಗಳ ಮೂಲಕ ಅವರನ್ನು ಮಹಾದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.
ಟಿಟಿಡಿ ಅಧಿಕಾರಿ ಜೆ.ಶ್ಯಾಮಲಾ ರಾವ್ ಅವರು ಶ್ರೀ ಸುಬುಧೇಂದ್ರ ಸ್ವಾಮಿಗಳವರಿಗೆ ಶ್ರೀವಾರಿ ಶೇಷವಸ್ತ್ರ ಮತ್ತು ಪ್ರಸಾದ ನೀಡಿ ಗೌರವಿಸಿದರು.
ಟಿಟಿಡಿ ಇಒ ಜೆ.ಶ್ಯಾಮಲಾ ರಾವ್ ಮತ್ತು ಇತರ ಟಿಟಿಡಿ ಅಧಿಕಾರಿಗಳು ಮತ್ತು ಪಂಡಿತರಿಗೆ ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿಯವರು ಶೇಷವಸ್ತ್ರ, ಫಲಮಂತ್ರಾಕ್ಷತೆ ಮತ್ತು ಸ್ಮರಣಿಕೆ ನೀಡಿ ಆಶೀರ್ವದಿಸಿದರು.