ಹೊಸ ದಿಗಂತ ವರದಿ,ಕೆ.ಆರ್.ಪೇಟೆ:
ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯಕ್ಷೇತ್ರ ಬಸದಿ ಹೊಸಕೋಟೆಯ ಬಸದಿ ಗೊಮ್ಮಟನಿಗೆ(ಬಾಹುಬಲಿ) ಇಂದು ನವ ಕಳಸಗಳಿಂದ ಪಾದಪೂಜೆ ಹಾಗೂ ಕಾವೇರಿ ಮಾತೆಗೆ ಬಾಗೀನ ಸಮರ್ಪಣಾ ಕಾರ್ಯ ನಡೆಯಿತು.
ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಗೊಮ್ಮಟನ ಪಾದಪೂಜೆ ಮತ್ತು ಬಾಗೀನ ಸಮರ್ಪಣಾ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿಗಳು ಭಾಗವಹಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಕಾವೇರಿ ನದಿಗೆ ನವ ಬಾಗೀನಗಳನ್ನು ಸಮರ್ಪಿಸಿದರು.