ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಖರ ಬೆಳಕು ಹಾಯಿಸಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಎರಡು ಮೀನುಗಾರಿಕಾ ಬೋಟುಗಳನ್ನು ಕೇರಳ ಮೀನುಗಾರಿಕಾ ಇಲಾಖೆ, ಮರೈನ್ ಎನ್ಫೋರ್ಸ್ ಮೆಂಟ್, ಕರಾವಳಿ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದೆ.
ಈ ಬೋಟುಗಳು ಕಾಸರಗೋಡು ಕಡಲ ತೀರದಿಂದ ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ ಪ್ರಖರ ಬೆಳಕು ಬಳಸಿಕೊಂಡು ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬೋಟುಗಳನ್ನು ಸ್ವಾಧೀನಕ್ಕೆ ಪಡೆದಿರುವ ಅಧಿಕಾರಿಗಳು, ಕೇರಳ ಮೀನುಗಾರಿಕಾ ನಿಯಂತ್ರಣ ಕಾನೂನು ಉಲ್ಲಂಘನೆ ಅಪರಾಧದದನ್ವಯ ಎರಡು ಬೋಟುಗಳಿಗೆ ಐದು ಲಕ್ಷ ರೂ. ದಂಡ ವಿಧಿಸಿದ್ದಾರೆ.