ಹೊಸದಿಗಂತ ಡಿಜಿಟಲ್ ಡೆಸ್ಕ್
ಟಿ 20 ವಿಶ್ವಕಪ್ ಗೆ ಮುನ್ನ ಸ್ಟಾರ್ ಬೌಲರ್ ಬೂಮ್ರಾ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದು ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅವರ ಸ್ಥಾನದಲ್ಲಿ ಯಾರನ್ನು ಆಡಿಸುವುದು ಎಂದು ಮ್ಯಾನೇಜ್ ಮೆಂಟ್ ಚಿಂತೆಯಲ್ಲಿರುವಾಗಲೇ ಇದೀಗ ಮತ್ತೊರ್ವ ಸ್ಟಾರ್ ಬೌಲರ್ ಇಂಜ್ಯೂರಿಗೆ ತುತ್ತಗಿದ್ದಾನೆ. ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನಕ್ಕೂ ಮೊದಲು ತರಬೇತಿ ಅವಧಿಯಲ್ಲಿ ಉಂಟಾದ ಪಾದದ ನೋವಿನಿಂದ ವೇಗಿ ದೀಪಕ್ ಚಹಾರ್ ಉಳಿದ ಎರಡು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
“ದೀಪಕ್ ಪಾದದ ನೋವಿನಿಂದ ಬಳಲುತ್ತದ್ದಾರೆ. ಆದರೆ ಇದು ತುಂಬಾ ಗಂಭೀರ ಗಾಯವಲ್ಲ. ಆದಾಗ್ಯೂ ಕೆಲವು ದಿನಗಳ ವಿಶ್ರಾಂತಿ ಸಲಹೆ ನೀಡಬಹುದುʼ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
“ಟಿ 20 ವಿಶ್ವಕಪ್ ಸ್ಟ್ಯಾಂಡ್-ಬೈ ಪಟ್ಟಿಯಲ್ಲಿರುವ ದೀಪಕ್ ಗಾಗ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದೆ. ಬಲಗೈ ವೇಗಿ ಚಹರ್ ಫೆಬ್ರವರಿಯಲ್ಲಿ ಗಾಯಗೊಂಡ ನಂತರ ಆಗಸ್ಟ್‌ನಲ್ಲಿ ತಂಡಕ್ಕೆ ಮತ್ತೆ ಪುನರಾಗಮನ ಮಾಡಿದ್ದರು. ಅವರನ್ನು ಬೂಮ್ರಾ ಸ್ಥಾನದಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇತ್ತು. ಆದರೆ ಇದೀಗ ಮತ್ತೊಮ್ಮೆ ಗಾಯಾಳುವಾಗಿರುವುದು ಆಯ್ಕೆಗಾರರು ಮತ್ತೊಬ್ಬ ಬೌಲರ್ ನತ್ತ ಗಮನಹರಿಸುವ ಅನಿವಾರ್ಯತೆ ಸೃಷ್ಟಿಸಿದೆ. ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಹಾರುವ ನಿರೀಕ್ಷೆಯಿದೆ.