ದೀಪಕ್ ಪಟದಾರಿ ಹತ್ಯೆ ಪ್ರಕರಣ: 360 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಯನಾಳ ಗ್ರಾಪಂ ಸದಸ್ಯ ದೀಪಕ್ ಪಟದಾರಿ ಹತ್ಯೆಗೆ ಸಂಬಂಸಿದಂತೆ ಸಿಐಡಿ ಅಧಿಕಾರಿಗಳು  ನ್ಯಾಯಾಲಯದಲ್ಲಿ ಹಂತಕರ ವಿರುದ್ಧ ಸುಮಾರು 360ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ದೀಪಕ್ ಪಟದಾರಿಯನ್ನು ಜು. 4 ರಂದು 10 ಜನರ ಗುಂಪು ರಾಯನಾಳದ ಬಳಿ ದೀಪಕ್‌ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೊದಲು ಆರು ಜನರನ್ನು ಬಂಧಿಸಿದ್ದರು. ನಂತರ ದೀಪಕ ಪಟದಾರಿ ಪತ್ನಿ ಪುಷ್ಪಾ ಅವರು ಪ್ರಮುಖ 4 ಆರೋಪಿಗಳನ್ನು ಬಂಧಿಸಬೇಕು ಆಗ್ರಹಿಸಿ ಪಟದಾರಿ ಕುಟುಂಬದ ಸದಸ್ಯರು ಸೇರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಅಲ್ಲದೆ ಪ್ರಕರಣದ ಪಾರದರ್ಶಕ ತನಿಖೆ ನಡೆಸಲು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ಡಿಐಜಿ ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದರು. ರಾಜ್ಯ ಸರಕಾರ ಈ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಈ ಪ್ರಕರಣ ಸಿಐಡಿ ಅಕಾರಿಗಳು ನಡೆಸುವಾಗಲೇ ಪುಷ್ಪಾ ಪಟದಾರಿ ಸೆ. 21 ರಂದು ನವನಗರದ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂದರ್ಭದಲ್ಲಿ ನನ್ನ ಸಾವಿರಗೆ ಮೇಟಿ ಕುಟುಂಬ ಕಾರಣ ಎಂಬ ಪತ್ರ  ಪೊಲೀಸರಿಗೆ ದೊರೆಕಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಮುಖ್ಯ ಆರೋಪಿಗಳಾದ ಯಲ್ಲಪ್ಪ ಆರ್.ಮೇಟಿ ಮತ್ತು ರುದ್ರಪ್ಪ ಮೇಟಿ ತಲೆಮರೆಸಿಕೊಂಡಿದ್ದರು. ಅವರನ್ನು ಅ. 7ರಂದು ಮುಧೋಳದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಕೊಲೆ ಪ್ರಕರಣದಲ್ಲಿ ಬಂಧಿತರಾದ ಪ್ರವೀಣ ಮುಲ್ದಿಂಗನವರ, ಮಲ್ಲಿಕಾರ್ಜುನ ಮೇಟಿ, ಶಿವಪ್ಪ ಮೇಟಿ, ಯಲ್ಲಪ್ಪ ಬಿ. ಮೇಟಿ, ಪ್ರಕಾಶ ಮೇಟಿ, ಉಳವೇಶ ಮೇಟಿ, ಚಂದ್ರಶೇಖರ ಮುಲ್ದಿಂಗನವರ, ಬಸವರಾಜ ಮಾರಡಗಿ ಹಾಗೂ ಹಾಗೂ ಯಲ್ಲಪ್ಪ ಆರ್.ಮೇಟಿ, ರುದ್ರಪ್ಪ ಮೇಟಿ ವಿರುದ್ಧ ನ್ಯಾಯಾಲಯದಲ್ಲಿ ಅ. 3 ರಂದು ಧೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!