ಮಂಗಳೂರಿನಲ್ಲಿ ಸಿಕ್ತು ದೀಪಿಕಾ ದಾಸ್ ಬೆಕ್ಕು, ಯಾರೋ ಕಿಡ್ನಾಪ್ ಮಾಡಿದ್ದರು ಅಂತಿದ್ದಾರೆ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ದೀಪಿಕಾ ದಾಸ್ ಶ್ಯಾಡೋ ಹೆಸರಿನ ತಮ್ಮ ಬೆಕ್ಕು ಕಳೆದುಹೋಗಿದೆ, ಹುಡುಕಿಕೊಟ್ಟವರಿಗೆ ನಗದು ಬಹುಮಾನ ಎಂದು ಘೋಷಣೆ ಮಾಡಿದ್ದರು.

ಇದಾದ ಬಳಿಕ ಮಂಗಳೂರಿನಲ್ಲಿ ಶ್ಯಾಡೋ ಸಿಕ್ಕಿದ್ದು, ನನ್ನ ಬೆಕ್ಕನ್ನು ಯಾರೋ ಕಿಡ್ನಾಪ್ ಮಾಡಿದ್ದರು. ಸದ್ಯ ನನ್ನ ಶ್ಯಾಡೋ ನನಗೆ ಸಿಕ್ಕಿದೆ ಎಂದು ದೀಪಿಕಾ ಪೋಸ್ಟ್ ಮಾಡಿದ್ದಾರೆ. ನನ್ನ ಬೆಕ್ಕನ್ನು ಹುಡುಕಿಕೊಡೋದಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ, ಬೆಕ್ಕು ನನ್ನ ಕೈ ಸೇರಲಿ ನಂತರ ಎಲ್ಲ ಮಾಹಿತಿ ನೀಡುತ್ತೇನೆ ಎಂದು ದೀಪಿಕಾ ಹೇಳಿದ್ದಾರೆ.

ದೀಪಿಕಾ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸ್ಪಂದನೆ ಸಿಕ್ಕಿತ್ತು, ಕಪ್ಪು ಬೆಕ್ಕುಗಳನ್ನು ವಾಮಾಚಾರಕ್ಕೂ ಬಳಸ್ತಾರೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!