ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ಅಂಗವಾಗಿ ಪತಿ ರಣ್‌ವೀರ್ ಸಿಂಗ್ (Ranveer Singh) ಜೊತೆ ದೀಪಿಕಾ ಪಡುಕೋಣೆ (Deepika Padukone) ಆಗಮಿಸಿ ವೋಟ್ ಮಾಡಿದ್ದಾರೆ. ಈ ವೇಳೆ ನಟಿಯ ಬೇಬಿ ಬಂಪ್ ವಿಡಿಯೋ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾಳ ಬೇಬಿ ಬಂಪ್ ಮೊದಲ ಬಾರಿಗೆ ಎಲ್ಲರ ಕಣ್ಣಿಗೆ ಬಿದ್ದಿದೆ. ಈ ಮೂಲಕ ಜೋಡಿ ಬಾಡಿಗೆ ತಾಯ್ತನ ಆಶ್ರಯಿಸಿದ್ದಾರೆ ಎಂಬ ವದಂತಿಗೂ ತೆರೆ ಬಿದ್ದಿದೆ.
ಈ ವೇಳೆ ರಣ್‌ವೀರ್, ಪತ್ನಿ ದೀಪಿಕಾರ ಕೈ ಹಿಡಿದು ಎಚ್ಚರಿಕೆಯಿಂದ ಕಾರಿನಲ್ಲಿ ಕೂರಿಸಿದ್ದರು. ಈ ಹಿಂದೆ ಸಿನಿಮಾ ಶೂಟಿಂಗ್, ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ನಟಿಯನ್ನು ನೋಡಿ ನಿಜಕ್ಕೂ ಗರ್ಭಿಣಿನಾ? ಎಂದು ಪ್ರಶ್ನಿಸಿದ್ದರು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ.
ಇದನ್ನು ನೋಡಿದ ನೆಟ್ಟಿಗರು ದೀಪಿಕಾ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ, ಈ ಜೋಡಿಗೆ ಗಂಡು ಮಗುವೇ ಆಗುವುದು ಎಂದು ಭವಿಷ್ಯ ಹೇಳುತ್ತಿದ್ದಾರೆ.ಆಕೆ ದಪ್ಪಗಾಗಿಲ್ಲ, ಕೇವಲ ಹೊಟ್ಟೆ ಬಂದಿದೆ, ಮುಖದಲ್ಲಿ ಗ್ಲೋ ಕಡಿಮೆಯಾಗಿದೆ- ಹೀಗಾಗಿ ಹೊಟ್ಟೆಯಲ್ಲಿ ಗಂಡು ಮಗುವೇ ಇದೆ ಎಂದು ಕೆಲವರು ಹೇಳಿದ್ದಾರೆ.
ಒಟ್ಟಿನಲ್ಲಿ ದೀಪಿಕಾ ಬೇಬಿ ಬಂಪ್ ಅಭಿಮಾನಿಗಳಿಗೆ ಸಂತಸ ತಂದಿದೆ. ಇನ್ನು ಕೇವಲ 4 ತಿಂಗಳಲ್ಲಿ ಮುದ್ದಾದ ಭವಿಷ್ಯದ ಸ್ಟಾರ್ ಹುಟ್ಟಲಿದೆ ಎಂದವರು ಹೇಳುತ್ತಿದ್ದಾರೆ.