ಪರೀಕ್ಷಾ ಪೆ ಚರ್ಚಾದಲ್ಲಿ ಖಿನ್ನತೆ ಬಗ್ಗೆ ಮಾತನಾಡಿದ ದೀಪಿಕಾ: ಪ್ರಧಾನಿ ಮೋದಿಗೆ ಧನ್ಯವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿದ್ಯಾರ್ಥಿಗಳಿಗೆ ಪರೀಕ್ಷೆ ಬಂತು ಎಂದರೆ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡ ದೂರ ಮಾಡಲು ಪ್ರಧಾನಿ ಮೋದಿ ಅವರು ಪರೀಕ್ಷಾ ಪೆ ಚರ್ಚಾ ಹೆಸರಿನ ಕಾರ್ಯಕ್ರಮ ಆರಂಭಿಸಿದ್ದಾರೆ.

ಇದು ಎಂಟನೇ ಎಡಿಷನ್ ಆಗಿದ್ದು, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಮಕ್ಕಳ ಜೊತೆ ಮಾತನಾಡಿದ್ದಾರೆ. ಈಗ ದೀಪಿಕಾ ಪಡುಕೋಣೆ ಅವರು ಇದರ ಭಾಗವಾಗಿದ್ದಾರೆ. ಈ ಪ್ರೋಮೋನ ಅವರ ಹಂಚಿಕೊಂಡಿದ್ದಾರೆ. ಇದರ ಸಂಪೂರ್ಣ ಎಪಿಸೋಡ್ ಫೆಬ್ರವರಿ 12ರ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಚಾನೆಲ್​ನಲ್ಲಿ ಪ್ರಸಾರ ಕಾಣಲಿದೆ.

ದೀಪಿಕಾ ಪಡುಕೋಣೆ ಬಾಲಿವುಡ್​​ನ ಯಶಸ್ವಿ ನಟಿ. ಅವರು ಉದ್ಯಮಿ ಆಗಿಯೂ ಯಶಸ್ಸು ಕಂಡಿದ್ದಾರೆ. ಇದರ ಜೊತೆಗೆ ಅವರು ಸಾಕಷ್ಟು ಒತ್ತಡಗಳನ್ನು ಕೂಡ ಎದುರಿಸಬೇಕಾಯಿತು. ಈ ಒತ್ತಡದಿಂದ ಹೊರ ಬಂದು ಅವರು ಒಂದಷ್ಟು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈಗ ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಅವರು ಇದೇ ರೀತಿಯ ಸಂದೇಶ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಹಂಚಿಕೊಂಡಿರೋ ವಿಡಿಯೋದಲ್ಲಿ ಅವರ ಹಳೆಯ ದಿನಗಳ ಬಗ್ಗೆ ಇದೆ. ಇದರಲ್ಲಿ ದೀಪಿಕಾ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರು ಚಿಕ್ಕವರಿದ್ದಾಗ ತುಂಬಾನೇ ತುಂಟತನದ ಸ್ವಭಾವದವರಾಗಿದ್ದರಂತೆ. ಅವರು ಗಣಿತದಲ್ಲಿ ಸಖತ್ ವೀಕ್ ಆಗಿದ್ದರಂತೆ. ಈಗಲೂ ಅವರ ವೀಕ್​ನೆಸ್ ಗಣಿತವೇ ಆಗಿದೆ.

ದೀಪಿಕಾ ಪಡುಕೋಣೆ ಅವರು ಒಮ್ಮೆ ಖಿನ್ನತೆಗೆ ಒಳಗಾದರು. ಈ ಘಟನೆಯ ಬಗ್ಗೆಯೂ ವಿದ್ಯಾರ್ಥಿಗಳ ಬಳಿ ಹೇಳಿಕೊಂಡಿದ್ದಾರೆ. ಆ ಘಟನೆಯಿಂದ ಹೇಗೆ ಹೊರ ಬಂದರು ಎಂಬುದನ್ನು ಅವರು ಎಪಿಸೋಡ್​​ನಲ್ಲಿ ವಿವರಿಸಲಿದ್ದಾರೆ.

ದೀಪಿಕಾ ಪಡುಕೋಣೆ ಅವರು ಮಕ್ಕಳಿಗೆ ವಿವಿಧ ರೀತಿಯ ಆ್ಯಕ್ಟಿವಿಟಿ ಮಾಡಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ತಮ್ಮ ಬಳಿ ಇರುವ ಬಲ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ವೇಳೆ ಅವರು ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!