ಹೊಸದಿಗಂತ ಹಾಸನ :
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆಯಿಂದ ಗಜಪಡೆ ದಾಳಿಗೆ ಅಪಾರ ಪ್ರಮಾಣದ ಕಟಾವಿಗೆ ಬಂದಿದ್ದ, ಕಟಾವು ಮಾಡಿದ್ದ ಭತ್ತದ ಬೆಳೆ ನಾಶವಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹಾಡ್ಲಹಳ್ಳಿ, ಮರ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಡ್ಲಹಳ್ಳಿ ಗ್ರಾಮದ ರಾಕೇಶ್ ಎಂಬುವವರ ಗದ್ದೆಯಲ್ಲಿ ಬೆಳೆದಿದ್ದ ಭತ್ತ, ನಿನ್ನೆ ಕಟಾವು ಮಾಡಿ ಇಂದು ಕಣಕ್ಕೆ ಸಾಗಿಸಲು ಸಿದ್ದತೆ ನಡೆಸಿದ್ದರು. ಮುಂಜಾನೆ ದಾಳಿ ಮಾಡಿರುವ ಕಾಡಾನೆಗಳು ಸಂಪೂರ್ಣ ಭತ್ತದ ಬೆಳೆಯನ್ನು ನಾಶಪಡಿಸಿವೆ. ಕೈ ಬಂದ ತುತ್ತು ಬಾಯಿಗೆ ಬರದಂತಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಭತ್ತದ ಬೆಳೆ ಕಳೆದುಕೊಂಡು ರೈತ ಕಂಗಾಲಾಗಿದ್ದಾರೆ.
ಮತ್ತೊಂದೆಡೆ ಕಾಡಾನೆಗಳು ಮರ್ಜನಹಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆಯನ್ನು ನಾಶಪಡಿಸಿವೆ. ಗ್ರಾಮದ ಗೂಳಿರಾಜು, ಕೃಷ್ಣೇಗೌಡ ಎಂಬುವವರಿಗೆ ಸೇರಿದ ಭತ್ತದ ಗದ್ದೆಯನ್ನು ತಿಂದು, ತುಳಿದು ನೆಲಸಮ ಮಾಡಿವೆ. ಕಾಡಾನೆ ಕಾಟದಿಂದ ರೋಸಿ ಹೋದ ಮಲೆನಾಡು ಭಾಗದ ರೈತರು.
ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರ ಆಗ್ರಹವಾಗಿದೆ.
ಕಾಡಾನೆಗಳ ಉಪಟಳಕ್ಕೆ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.