ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೀಪಾವಳಿ ಹಬ್ಬ ಕಳೆದರೂ ವಾಯು ಮಾಲಿನ್ಯ ಸ್ವಲ್ಪವೂ ಸುಧಾರಿಸಿಲ್ಲ. ಇಂದು ದೆಹಲಿಯಲ್ಲಿ ವಾಯು ಮಾಲಿನ್ಯ ಮತ್ತೊಮ್ಮೆ ವಿಪರೀತ ಮಟ್ಟ ತಲುಪಿದ್ದು ರಸ್ತೆ, ಗಿಡ, ಮರ, ಕಟ್ಟಡಗಳು ಎಲ್ಲವೂ ಅಸ್ಪಷ್ಟವಾಗಿ ಗೋಚರಿಸುತ್ತಿವೆ. ಕಲುಷಿತ ಗಾಳಿಯಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಪರದಾಡುವಂತಾಗಿದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ದೆಹಲಿಯ ಬವಾನಾದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 442, ಐಟಿಒದಲ್ಲಿ 415, ಜಹಾಂಗೀರ್ಪುರಿಯಲ್ಲಿ 441, ದ್ವಾರಕಾದಲ್ಲಿ 417, ಅಲಿಪುರದಲ್ಲಿ 415 ಮತ್ತು ದೆಹಲಿ ವಿಮಾನ ನಿಲ್ದಾಣದ ಆನಂದ್ ವಿಹಾರ್‌ನಲ್ಲಿ 411ರಷ್ಟು ದಾಖಲಾಗಿದೆ.
ರಾಷ್ಟ್ರ ರಾಜಧಾನಿಯ ಹಲವೆಡೆ ಮಂಜು ದಟ್ಟವಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ರಸ್ತೆ ಕಾಣದೆ ಪರದಾಡುವಂತಾಗಿದೆ. ಗೋಚರತೆ ಮತ್ತಷ್ಟು ಹದಗೆಟ್ಟಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜನರ ಆರೋಗ್ಯ ಹದಗೆಡುವುದರಲ್ಲಿ ಎರಡು ಮಾತಿಲ್ಲ.
#WATCH | A layer of haze covers Delhi as the air quality in several areas in the city remains in ‘Severe’ category.
(Visuals from Akshardham, shot at 7:20 am) pic.twitter.com/u7Iuqgf4mZ
— ANI (@ANI) November 16, 2023