ದೆಹಲಿಗೆ ಹೊರಟಿದ್ದ ಆಕಾಶಾ ಏರ್‌ ಲೈನ್ಸ್‌ ವಿಮಾನಕ್ಕೆ ಢಿಕ್ಕಿ ಹೊಡೆದ ಪಕ್ಷಿ: ರೇಡೋಮ್‌ ಗೆ ಹಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುರುವಾರ ಬೆಳಗ್ಗೆ ದೆಹಲಿಯಿಂದ ಹೊರಟಿದ್ದ ಆಕಾಶ ಏರ್‌ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಇತ್ತೀಚೆಗೆ ಬಿಡುಗಡೆಯಾದ ಆಕಾಶ ಏರ್‌ನಿಂದ ನಿರ್ವಹಿಸಲ್ಪಡುವ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 1900 ಅಡಿ ಎತ್ತರದಲ್ಲಿ ಹಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿಮಾನದ ರೇಡೋಮ್‌ (ಮುಂಭಾಗದ ಮೂಗಿನಂತಹ ಪ್ರದೇಶ) ಗೆ ಹಾನಿಯಾಗಿದೆ.

“ಅಕ್ಟೋಬರ್ 27 ರಂದು ಅಹಮದಾಬಾದ್‌ನಿಂದ ದೆಹಲಿಗೆ ಹಾರುತ್ತಿದ್ದ ಆಕಾಶ ಏರ್ ಫ್ಲೈಟ್ QP 1333 ಹಕ್ಕಿಗೆ ಡಿಕ್ಕಿ ಹೊಡೆದಿದೆ. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಲಾಗಿದೆ ಮತ್ತು ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ವಿಮಾನವನ್ನು ವಿವರವಾದ ತಪಾಸಣೆಗಾಗಿ ಇರಿಸಲಾಗಿದೆ” ಎಂದು ಆಕಾಶ ಏರ್ ವಕ್ತಾರರು ತಿಳಿಸಿದ್ದಾರೆ.

ಆಕಾಶದ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!