ದೆಹಲಿ ಚಲೋ ರ‍್ಯಾಲಿ: ರಸ್ತೆಗಳಲ್ಲಿ ಲೋಹ, ಕಾಂಕ್ರೀಟ್ ತಡೆಗೋಡೆ, ಎಲ್ಲೆಡೆ ಹೈ ಅಲರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ದೆಹಲಿ ಚಲೋ ರ‍್ಯಾಲಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದು, ರೈತರ ರ‍್ಯಾಲಿಯನ್ನು ತಡೆಯಲು ಶಂಭೂ, ಸಿಂಘೂ ಗಡಿಯಲ್ಲಿ ಹಲವು ಹಂತದ ತಡೆಬೇಲಿಗಳನ್ನು ಪೊಲೀಸರು ಹಾಕಿದ್ದಾರೆ. ಇದರೊಂದಿಗೆ ಟಿಕಾರಿ ಹಾಗೂ ಘಾಜಿಯಾಪುರದಲ್ಲೂ ಭದ್ರತೆ ಹೆಚ್ಚಿಸಲಾಗಿದೆ.

ದೆಹಲಿ ಹಾಗೂ ಹರಿಯಾಣ ಗಡಿಯಲ್ಲಿ ಪೊಲೀಸರ ತಡೆಬೇಲಿಯನ್ನು ದಾಟಿ ರೈತರು ಮುನ್ನುಗ್ಗಿದ್ದಾರೆ. ಕಳೆದ ಬಾರಿ ರೈತರ ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ಹಾರಿಸಲಾಗಿದ್ದ ಕೆಂಪುಕೋಟೆಗೆ ಈ ಬಾರಿ ಭದ್ರತೆ ಹೆಚ್ಚಿಸಲಾಗಿದೆ.

ರಾಜೀವ್ ಚೌಕ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೇಟರಿಯೇಟ್, ಪಟೇಲ್ ಚೌಕ್, ಉದ್ಯೊಗ ಭವನ, ಜನಪತ, ಬಾರಾಕಂಬ ರಸ್ತೆ, ಲೋಕ ಕಲ್ಯಾಣ ಮಾರ್ಗ ಹಾಗೂ ಖಾನ್ ಮಾರುಕಟ್ಟೆ ಒಳಗೊಂಡಂತೆ ದೆಹಲಿ ಮೆಟ್ರೊದ 9 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮ ದ್ವಾರಗಳನ್ನು ಮುಚ್ಚಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಪರಿಸ್ಥಿತಿ ಎದುರಿಸಲು ಪೊಲೀಸ್ ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಹಲವು ಹಂತಗಳ ಬ್ಯಾರಿಕೇಡ್‌ಗಳನ್ನು ರಸ್ತೆಗಳಲ್ಲಿ ಹಾಕಲಾಗಿದೆ. ರಸ್ತೆಗಳಲ್ಲಿ ಲೋಹ ಮತ್ತು ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!