Tuesday, February 27, 2024

ಚಾಮುಂಡಿಪುರ ಸರ್ಕಲ್ ನಲ್ಲಿ ಭಾರತ್ ಅಕ್ಕಿ ವಿತರಣೆಗೆ ಎಸ್.ಎ.ರಾಮದಾಸ್ ಚಾಲನೆ

ಹೊಸದಿಗಂತ ವರದಿ, ಮೈಸೂರು:

ಇಲ್ಲಿನ ಚಾಮುಂಡಿಪುರ ಸರ್ಕಲ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿರುವ ಭಾರತ್ ಅಕ್ಕಿ ಸಾರ್ವಜನಿಕರಿಗೆ ವಿತರಣೆ ಮಾಡುವ ಮೂಲಕ ಮಾಜಿ ಸಚಿವ ಎಸ್.ಎ.ರಾಮದಾಸ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲೆಂದು ಬಹಳ ಕಡಿಮೆ ದರದಲ್ಲಿ ಜನರಿಗೆ ಅಕ್ಕಿ ವಿತರಿಸಲೆಂದು ಭಾರತ್ ಅಕ್ಕಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ವಿತರಿಸುತ್ತಿದೆ.

ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ೨೦ ಕೆಜಿಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳಲು ಅವಕಾಶವಿದೆ. ಅಲ್ಲದೇ ಈ ಯೋಜನೆ ಅಡಿಯಲ್ಲಿ ಗೋಧಿ ಮತ್ತು ಕಡಲೆ ಬೆಳೆಗಳನ್ನು ಕೂಡ ಕೊಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!