ಅಕ್ರಮ ಬಳಕೆ ಆರೋಪದ ಮೇಲೆ ದೆಹಲಿ ಸಿಎಂ ಅತಿಶಿ ನಿವಾಸ ಸೀಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಬಿಜೆಪಿಯ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿ ಅತಿಶಿ ಅವರ ವಸ್ತುಗಳನ್ನು ಮುಖ್ಯಮಂತ್ರಿ ನಿವಾಸದಿಂದ ಬಲವಂತವಾಗಿ ತೆಗೆದುಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಆರೋಪಿಸಿದೆ. ಅಧಿಕೃತ ನಿವಾಸದಿಂದ ಹಲವಾರು ಪೆಟ್ಟಿಗೆಗಳು ಮತ್ತು ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ದೃಶ್ಯಗಳ ವಿಡಿಯೋ ವೈರಲ್ ಆಗಿದೆ.

ಸಿಎಂ ಅತಿಶಿ ಅವರ ನಿವಾಸಕ್ಕೆ ಡಬಲ್ ಬೀಗ ಹಾಕಲಾಗಿದೆ. ಕೀಗಳನ್ನು ಹಸ್ತಾಂತರಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ಸರಿಯಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಕ್ರಮ ಬಳಕೆ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅತಿಶಿ ಅವರ ಅಧಿಕೃತ ನಿವಾಸವನ್ನು ಪಿಡಬ್ಲ್ಯುಡಿ ಇಲಾಖೆ ಇಂದು ಸೀಲ್ ಮಾಡಿದೆ.

ದೆಹಲಿ ಮುಖ್ಯಮಂತ್ರಿ ಅತಿಶಿ ಅವರ ಮನೆಯಿಂದ ಅವರ ವಸ್ತುಗಳನ್ನು ಸಹ ತೆಗೆದುಹಾಕಲಾಗಿದೆ ಸಿಎಂಒ ಹೇಳಿದೆ. ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ವಾಸವಿದ್ದ ಈ ಮನೆಯನ್ನು ಅತಿಶಿ ಅವರಿಗೆ ಹಂಚಿಕೆ ಮಾಡಲಾಗಿತ್ತು.ಪ್ರಮುಖ ಬಿಜೆಪಿ ನಾಯಕರೊಬ್ಬರಿಗೆ ಈ ಬಂಗಲೆ ಮಂಜೂರು ಮಾಡುವ ಉದ್ದೇಶದಿಂದ ಸಿಎಂ ನಿವಾಸವನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಗಳ ಕಚೇರಿ ದೂರಿದೆ.

ಈ ಆರೋಪಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಥವಾ ಬಿಜೆಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!