ದೆಹಲಿ-ದರ್ಭಾಂಗಾ ಸೂಪರ್‌ಫಾಸ್ಟ್ ರೈಲಿನಲ್ಲಿ ಬೆಂಕಿ: 8 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ-ದರ್ಭಾಂಗ (Delhi-Darbhanga Train) ರೈಲಿನ ನಾಲ್ಕು ಬೋಗಿಗಳಿಗೆ ಬುಧವಾರ ಬೆಂಕಿ ಹೊತ್ತಿಕೊಂಡ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ಇಟಾವಾ ಬಳಿ 02570 ದೆಹಲಿ-ದರ್ಬಂಗಾ ಕ್ಲೋನ್ ಸ್ಪೆಷಲ್‌ನ ಎಸ್1 (ಸ್ಲೀಪರ್) ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು.

ಕೋಚ್‌ಗಳಲ್ಲಿ ಒಂದಕ್ಕೆ ಭಾರಿ ಬೆಂಕಿ ಆವರಿಸಿದ ವೇಳೆ ಪ್ರಯಾಣಿಕರು ಮತ್ತು ಅಧಿಕಾರಿಗಳು ಸುತ್ತಲೂ ನಿಂತಿದ್ದರು. ಆದರೆ ದರ್ಭಾಂಗಾನತ್ತ ಹೊರಟ ರೈಲಿನಲ್ಲಿ ಸಣ್ಣ ಹೊಗೆ ಕಾಣಿಸಿಕೊಂಡಿರುವುದನ್ನು ಗಮನಿಸಿದ ಸ್ಟೇಶನ್ ಮಾಸ್ಟರ್ ತಕ್ಷಣವೇ ಲೋಕೋಪೈಲೆಟ್‌ಗೆ ಮಾಹಿತಿ ನೀಡಿ ರೈಲು ನಿಲ್ಲಿಸಲಾಗಿದೆ. ಪ್ರಯಾಣಿಕರನ್ನು ತಕ್ಷಣವೇ ಇಳಿಸಲಾಗಿದೆ.

ಗಾಯಗೊಂಡವರನ್ನು ಇಟಾವಾದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!