ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಹಮ್ಮದ್ ಶಮಿ ಮಾರಕ ದಾಳಿಯಿಂದ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಈ ಮೂಲಕ ವಿಶ್ವಕಪ್ ಟೂರ್ನಿ ಫೈನಲ್ ಪ್ರವೇಶಿಸಿದೆ .
ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಬೌಲರ್ಸ್ ಒತ್ತಡ ಎದುರಿಸಿದರು. ವಿಕೆಟ್ ಕಬಳಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕಾಯಿತು. ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿದ್ದರೂ, ಬಳಿಕ ನ್ಯೂಜಿಲೆಂಡ್ ಆವರಿಕೊಂಡಿತ್ತು. ಆದರೆ ಮೊಹಮ್ಮದ್ ಶಮಿ ಮಾರಕ ದಾಳಿಯಿಂದ ಪಂದ್ಯ ಭಾರತದತ್ತ ವಾಲಿತು. ಡರಿಲ್ ಮೆಚಿಲ್ ಶತಕ, ನಾಯಕ ವಿಲಿಯಮ್ಸನ್ ಹಾಫ್ ಸೆಂಚುರಿ ನಡುವೆಯೂ ಭಾರತದ ಸಂಘಟಿತ ದಾಳಿ ಫಲ ನೀಡಿತು.
ಚೇಸಿಂಗ್ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದರು. 30 ರನ್ ಸಿಡಿಸುವಷ್ಟರಲ್ಲೇ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಶಮಿ ದಾಳಿಗೆ ಡೆವೋನ್ ಕೊನ್ವೆ ವಿಕೆಟ್ ಪತನಗೊಂಡಿತು. ಡೆವೋನ್ 13 ರನ್ ಸಿಡಿಸಿ ಔಟಾದರು.
ಮತ್ತೆ ದಾಳಿ ಮುಂದುವರಿಸಿದ ಮೊಹಮ್ಮದ್ ಶಮಿ ಅದ್ಭುತ ಫಾರ್ಮ್‌ನಲ್ಲಿದ್ದ ರಚಿನ್ ರವೀಂದ್ರ ವಿಕೆಟ್ ಕಬಳಿಸಿದರು. ರಚಿನ್ 13 ರನ್ ಸಿಡಿಸಿ ನಿರ್ಗಮಿಸಿದರು. 39 ರನ್‌ಗೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡಿತು.
ಬಳಿಕ ಜೊತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡರಿಲ್ ಮೆಚೆಲ್ ಟೀಂ ಇಂಡಿಯಾ ಟೆನ್ಶನ್ ಹೆಚ್ಚಿಸಿತು. ಡರಿಲ್ ಮಿಚೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದರು. ಇದು ಟೀಂ ಇಂಡಿಯಾಗೆ ಅಪಾಯಕ ಕರೆಗಂಟೆ ಬಾರಿಸಿತ್ತು. ವಿಲಿಯಮ್ಸನ್ ಹಾಗೂ ಮಿಚೆಲ್ ಜೊತೆಯಾಟದಿಂದ ನ್ಯೂಜಿಲೆಂಡ್ ಆತ್ಮವಿಶ್ವಾಸ ಹೆಚ್ಚಿತ್ತು.
ಮತ್ತೆ ದಾಳಿಗೆ ಇಳಿದ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ದಾಖಲೆಯ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತ್ತು. ಕೇನ್ ವಿಲಿಯಮ್ಸನ್ 69 ರನ್ ಸಿಡಿಸಿ ನಿರ್ಗಮಿಸಿದರು.
ವಿಲಿಯಮ್ಸನ್ ಬೆನ್ನಲ್ಲೇ ಟಾಮ್ ಲಾಥಮ್ ವಿಕೆಟ್ ಕಬಳಿಸಿದ ಶಮಿ, ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇತ್ತ ಡರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೊತೆಯಾಟ ಆರಂಭಗೊಂಡಿತು. ಈ ಜೋಡಿಯನ್ನು ಜಸ್ಪ್ರೀತ್ ಬುಮ್ರಾ ಬ್ರೇಕ್ ಮಾಡಿದರು.ಗ್ಲನ್ ಪಿಲಿಪ್ಸ್ 41 ರನ್ ಸಿಡಿಸಿ ಔಟಾದರು. ಮಾರ್ಕ್ ಚಂಪನ್ ಕೇವಲ 2 ರನ್ ಸಿಡಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಇತ್ತ ಶತಕದ ಬಳಿಕವೂ ಅಬ್ಬರಿಸುತ್ತಿದ್ದ ಡರಿಲ್ ಮಿಚೆಲ್ ಭಾರತಕ್ಕೆ ಆತಂಕ ಹೆಚ್ಚಿಸುತ್ತಲೇ ಇದ್ದರು. ಆದರೆ ಮೊಹಮ್ಮದ್ ಶಮಿ 134 ರನ್ ಸಿಡಿಸಿ ಗಟ್ಟಿಯಾಗಿ ನಿಂತಿದ್ದ ಮಿಚೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಹಾಗೂ ಫರ್ಗ್ಯೂಸನ್ ವಿಕೆಟ್ ಕಬಲಿಸದ ಶಮಿ, ನ್ಯೂಜಿಲೆಂಡ್ ತಂಡವನ್ನು 48.5 ಓವರ್‌ಗಳಲ್ಲಿ 327 ರನ್‌ಗೆ ಆಲೌಟ್ ಮಾಡಿದರು.
ಭಾರತ 70 ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು. 2011ರ ಬಳಿಕ ಭಾರತ ವಿಶ್ವಕಪ್ ಟೂರ್ನಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.
ಮೊಹಮ್ಮದ್ ಶಮಿ 7 ವಿಕೆಟ್ ಕಬಳಿಸಿ ಮಿಂಚಿದರು. ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ 50 ವಿಕೆಟ್ ಸಾಧನೆ ಮಾಡಿದ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ.