ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಕಾನೂನು ಬದ್ಧ ವಾಪಸಾತಿಗೆ ದೆಹಲಿ ಮುಕ್ತ: ಜೈಶಂಕರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವ ಭಾರತೀಯರ ಕಾನೂನು ಬದ್ಧ ವಾಪಸಾತಿಗೆ ದೆಹಲಿ ಮುಕ್ತವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಈ ಕುರಿತು ವಾಷಿಂಗ್ಟನ್‌ ಡಿಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೈಶಂಕರ್‌, ಕಾನೂನು ಬಾಹಿರವಾಗಿ ಯಾರಾದ್ರೂ ಇದ್ದರೆ, ಅವರು ನಮ್ಮ ದೇಶದ ಪ್ರಜೆಗಳೆಂದು ಖಚಿತವಾಗಿದ್ದರೆ, ಭಾರತಕ್ಕೆ ಮರಳಬಹುದು. ಅದಕ್ಕೆ ದೆಹಲಿ ಮುಕ್ತವಾಗಿರುತ್ತದೆ. ಈ ಬಗ್ಗೆ ಭಾರತದ ನಿಲುವು ಸ್ಪಷ್ಟ ಎಂದಿದ್ದಾರೆ.

ಭಾರತವು ತನ್ನ ದೇಶದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಅವಕಾಶ ಹೊಂದಬೇಕೆಂದು ಬಯಸುತ್ತದೆ. ಅದೇ ಸಮಯದಲ್ಲಿ ಅಕ್ರಮ ವಲಸೆಯನ್ನು ದೃಢವಾಗಿ ವಿರೋಧಿಸುತ್ತದೆ. ಏಕೆಂದರೆ ಅಕ್ರಮ ವಲಸೆಯು ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಗಳೂ ಇರುತ್ತವೆ ಎಂದು ಜೈಶಂಕರ್‌ ಹೇಳಿದ್ದಾರೆ.

ಸಚಿವ ಜೈಶಂಕರ್‌ ಅವರು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!