Monday, July 4, 2022

Latest Posts

ವಾಯಮಾಲಿನ್ಯ ನಿಯಂತ್ರಣಕ್ಕೆ ಸರ್ಕಸ್; ಉದ್ಯೋಗಿಗಳಿಗೆ ಬಂಪರ್‌ ಆಫರ್ ಕೊಟ್ಟ ದೆಹಲಿ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದೆಹಲಿಯಲ್ಲಿ ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಆಪ್‌ ಸರ್ಕಾರ ಮಹತ್ವದ ತೀರ್ಮಾನ ಮಾಡಿದೆ. ಮಾಲಿನ್ಯದ ತೀವ್ರತೆ ಕಡಿಮೆ ಮಾಡಲು ಎಲೆಕ್ಟ್ರಿಕ್‌ ವಾಹನಗಳ ಮೊರೆ ಹೋಗಿದೆ. ದೆಹಲಿಯಲ್ಲಿ ಈಗಾಗಲೇ ರಸ್ತೆಗಳಲ್ಲಿ ವಾಹನಗಳಿಗೆ ಸಮ ಮತ್ತು ಬೆಸ ಸಂಖ್ಯೆಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೂ ದೆಹಲಿ ಮಾಲಿನ್ಯದ ಪ್ರಪಾತದಲ್ಲಿ ತೂಗಾಡುತ್ತಿದೆ.
ಈ ನಿಟ್ಟಿನಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳ ನಂತರ ದ್ವಿಚಕ್ರ ವಾಹನಗಳು ಎರಡನೇ ಅತಿದೊಡ್ಡ ವಾಯು ಮಾಲಿನ್ಯಕಾರಕಗಳಾಗಿವೆ. ದೆಹಲಿ ಸರ್ಕಾರವು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಸಾಗಲು ಪ್ರಯತ್ನಿಸುತ್ತಿವೆ.
2024 ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಪಾಲನ್ನು ಒಟ್ಟು ಮಾರಾಟದ ಶೇಕಡಾ 25 ಕ್ಕೆ ಹೆಚ್ಚಿಸಲು ದೆಹಲಿ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ಸರ್ಕಾರವು ಈಗಾಗಲೇ ಪರಿಚಯಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ಸರ್ಕಾರ ಬಂಪರ್ ಆಫರ್ ಘೋಷಿಸಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಖರೀದಿಸಲು ಕೂಡಲೇ ಪಾವತಿ ಮಾಡಬೇಕಿಲ್ಲ ಇಎಂಐ ಮೂಲಕವಾಗಿ ಹಣ ಸಂದಾಐ ಮಾಡಬಹುದಾಗಿ ತಿಳಿಸಿದೆ. ಮೊದಲ ಹತ್ತು ಸಾವಿರ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಶೇಕಡಾ 25 ರಷ್ಟು ರಿಯಾಯಿತಿ ನೀಡಲಾಗಿದೆ ಇದರ ಜೊತೆಗೆ ಮೊದಲ 1,000 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸರ್ಕಾರವು ಹೆಚ್ಚುವರಿಯಾಗಿ 2,000 ರೂ ಪ್ರೋತ್ಸಾಹವನ್ನು ನೀಡುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss