ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಿರುದ್ಧ ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಅಪ್ ಲೋಡ್ ಮಾಡಿರುವ ವಿಡಿಯೋವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
‘ಕ್ಲಿಕ್‌ಬೈಟ್’ ಎಂಬ ಟೈಟಲ್ ನ ಯೂಟ್ಯೂಬ್ ವೀಡಿಯೋದಿಂದ ಟ್ರಸ್ಟ್‌ನ ಪ್ರತಿಷ್ಠೆಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಿದ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್, ಅಪ್ ಲೋಡ್ ಮಾಡಿರುವ ವಿಡಿಯೋಗಳು ಹಾಗೂ ಅದರ ಕಂಟೆಂಟ್ ತೆಗೆದುಹಾಕುವಂತೆ ಹೇಳಿದೆ.
ಇಶಾ ಫೌಂಡೇಶನ್ ವಿರುದ್ಧದ ಮಾನನಷ್ಟ ಉಂಟು ಮಾಡುವ ಕಂಟೆಂಟ್ ಹೊಂದಿರುವ ಎಲ್ಲಾ ವಿಡಿಯೋಗಳನ್ನು ತೆಗೆದುಹಾಕುವಂತೆ X,ಮೆಟಾ ಮತ್ತು ಗೂಗಲ್‌ಗೆ ನಿರ್ದೇಶಿಸಿ ನ್ಯಾಯಾಧೀಶರು ಮಧ್ಯಂತರ ಆದೇಶ ನೀಡಿದೆ.
ಮೇ ತಿಂಗಳ ಮುಂದಿನ ವಿಚಾರಣೆಯ ತನಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ಮೇ 09ರಂದು ನಡೆಯಲಿದೆ.