ದೆಹಲಿ ಮದ್ಯ ಹಗರಣ: ನಾಳೆ ವಿಚಾರಣೆಗೆ ಬರುವಂತೆ ಎಂಎಲ್‌ಸಿ ಕವಿತಾಗೆ ಇಡಿ ನೊಟೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಆರ್‌ಎಸ್ ಪಕ್ಷದ ಎಂಎಲ್ಸಿ ಕಲ್ವಕುಂಟ್ಲ ಕವಿತಾ ಅವರಿಗೆ ಇಡಿ ಅಧಿಕಾರಿಗಳು ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ (ಸೆಪ್ಟೆಂಬರ್ 15) ವಿಚಾರಣೆಗೆ ಹಾಜರಾಗುವಂತೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅರುಣ್ ಪಿಳ್ಳೈ ಅಪ್ರೂವರ್ ಆದ ಬಳಿಕ ಕವಿತಾ ಹೆಸರನ್ನು ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು. ತಾನು ಕವಿತಾ ಬೇನಾಮಿ ಎಂದು ಅರುಣಪಿಳ್ಳೆ ಈ ಹಿಂದೆ ಇಡಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದರಿಂದ, ಕವಿತಾ ಈ ಹಿಂದೆಯೂ ವಿಚಾರಣೆ ಎದರುಸಿದ್ದರು.

ದೆಹಲಿ ಮದ್ಯ ಹಗರಣ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪ್ರಕರಣದಲ್ಲಿ ಇಡಿ ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಶರತ್ ಚಂದ್ರ ರೆಡ್ಡಿ, ಮಾಗುಂಟ ಶ್ರೀನಿವಾಸ್ ರೆಡ್ಡಿ, ಮಾಗುಂಟ ರಾಘವ, ದಿನೇಶ್ ಅರೋರಾ ಮತ್ತು ರಾಮಚಂದ್ರ ಪಿಳ್ಳೈ ಕೂಡ ಸೇರಿದ್ದಾರೆ. ಇದರೊಂದಿಗೆ ಇಡಿ ಮತ್ತೊಮ್ಮೆ ಕವಿತಾಗೆ ನೋಟಿಸ್ ಜಾರಿ ಮಾಡಿದೆ.  ಈ ವರ್ಷ ಮಾರ್ಚ್ 16, 20 ಮತ್ತು 21 ರಂದು ಕವಿತಾ ಅವರನ್ನು ಮೂರು ದಿನಗಳ ಕಾಲ ಇಡಿ ವಿಚಾರಣೆ ನಡೆಸಿತ್ತು.

ಆ ವೇಳೆ ಬೆಳಗ್ಗೆ ಇಡಿ ಕಚೇರಿಗೆ ತೆರಳಿದ ಕವಿತಾ ರಾತ್ರಿವರೆಗೂ ವಿಚಾರಣೆಗೊಳಗಾಗಿದ್ದರು. ತನ್ನ ತನಿಖೆಯ ವಿಧಾನದ ವಿರುದ್ಧ ಆಕೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದೀಗ ತೆಲಂಗಾಣ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕವಿತಾಗೆ ಮತ್ತೊಮ್ಮೆ ಇಡಿ ನೋಟೀಸ್ ಜಾರಿ ಮಾಡಿದೆ. ಚುನಾವಣೆ ಹಿನ್ನೆಲೆ ಈಗಾಗಲೇ ಪಕ್ಷದ ಕಾರ್ಯಚಟುವಟಿಕೆಗಳಿಗೆ ವೇಳಾಪಟ್ಟಿ ಇದೆ ಎನ್ನುತ್ತಿವೆ ಪಕ್ಷದ ಮೂಲಗಳು. ಹೀಗಿರುಆಗ ನಾಳೆ ಕವಿತಾ ವಿಚಾರಣೆಗೆ ಹಾಜರಾಗುತ್ತಾರಾ ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!