ಡ್ಯಾನ್ಸ್‌ಗೆ ವೇದಿಕೆಯಾದ ದೆಹಲಿ ಮೆಟ್ರೋ: ಮತ್ತೊಂದು ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್ ಪಡೆಯಲು ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕೆಲವರು ಸಾರ್ವಜನಿಕವಾಗಿ ಫ್ರಾಂಕ್ ವಿಡಿಯೋ ಮಾಡಿದರೆ, ಇನ್ನು ಕೆಲವರು ಜನಸಂದಣಿ ಇರುವ ಸ್ಥಳಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ದೆಹಲಿ ಮೆಟ್ರೋ ನೃತ್ಯ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಮೊನ್ನೆ ಇಬ್ಬರು ಹುಡುಗಿಯರು ಮೆಟ್ರೋ ರೈಲಿನೊಳಗೆ ಪೋಲ್ ಡ್ಯಾನ್ಸ್ ಮಾಡಿದ್ದರೆ, ಇದೀಗ ಮತ್ತೊಬ್ಬ ಯುವತಿ ಸೋಲೋ ಡ್ಯಾನ್ಸ್ ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಲತಾ ಮಂಗೇಶ್ಕರ್ ಮತ್ತು ಉದಿತ್ ನಾರಾಯಣ ಹಾಡಿರುವ ಅಂದೇಖಿ ಹಾಡಿಗೆ ಯುವತಿ ಹೆಜ್ಜೆ ಹಾಕಿದ್ದಾಳೆ. ಯುವತಿಯ ಹೆಸರು ಸೀಮಾ ಕನೋಜಿಯಾ..ಎಲ್ಲರೂ ನೋಡುತ್ತಿದ್ದರೂ ಹೆಚ್ಚು ಗಮನ ಹರಿಸದೆ ಡ್ಯಾನ್ಸ್ ಮಾಡಿ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ವೈರಲ್ ಆಗಿದೆ.

ವಿಡಿಯೋಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಯಾಣಿಕರಿಗೆ ತೊಂದರೆ ಕೊಡುವುದಲ್ಲದೆ ಮೆಟ್ರೋ ಸೇವೆಯನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಯುವತಿ ಡ್ಯಾನ್ಸ್ ಮಾಡಿರುವ ಬಗ್ಗೆ ಅಧಿಕಾರಿಗಳು ಸೀರಿಯಸ್ ಆಗಿದ್ದಾರೆ.. ಏನಾಗುತ್ತೆ ನೋಡೋಣ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!