ನಿಯಂತ್ರಣ ತಪ್ಪಿದ ಮಾಲಿನ್ಯ: ದೆಹಲಿಯಲ್ಲಿ 999 ತಲುಪಿದ ಎಕ್ಯೂಐ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿನ ವಿಷಕಾರಿ ಗಾಳಿಯ ಅಸ್ತಮಾ ಮತ್ತು ಉಸಿರಾಟದ ರೋಗಿಗಳಿಗೆ ಒತ್ತಡವನ್ನು ಹೆಚ್ಚಿಸಿದೆ.

ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟ ತಲುಪಿದ್ದು, ನವದೆಹಲಿಯ ಅಶೋಕ್ ವಿಹಾರ್ ಪ್ರದೇಶದಲ್ಲಿ ಭಾನುವಾರ ಮಧ್ಯರಾತ್ರಿ 1 ಗಂಟೆಗೆ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ)999ರಷ್ಟು ದಾಖಲಾಗಿದೆ. ಇತರ ಪ್ರದೇಶಗಳಲ್ಲಿಯೂ ಮಾಲಿನ್ಯದಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ.

ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಸದ್ಯ ಮಳೆಯಾಗುವ ಸಾಧ್ಯತೆ ಇಲ್ಲ. ಮಾಲಿನ್ಯದಿಂದ ಮುಕ್ತಿ ಸಿಗುವ ಭರವಸೆಯೂ ಇಲ್ಲ. ಪರಿಸರ ತಜ್ಞರ ಪ್ರಕಾರ, ಮಾಲಿನ್ಯವನ್ನು ಎದುರಿಸಲು ಸರ್ಕಾರದ ಕ್ರಮಗಳು ಸಾಕಾಗುತ್ತಿಲ್ಲ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಎನ್‌ಸಿಆರ್‌ನ ಎಲ್ಲಾ ಭಾಗಗಳು ಬೆಳಿಗ್ಗೆ ಮಂಜುಗಡ್ಡೆಯಂತಹ ವಾತಾವರಣಕ್ಕೆ ಸಾಕ್ಷಿಯಾಗಿವೆ.

ಇದರಿಂದಾಗಿ ರಸ್ತೆಗಳಲ್ಲಿ ಗೋಚರತೆ ತುಂಬಾ ಕಡಿಮೆಯಾಗಿದ್ದು, ಜನರು ಉಸಿರಾಡಲೂ ಬಹಳಷ್ಟು ಕಷ್ಟವಾಗುತ್ತಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಪರಿಸ್ಥಿತಿಯು ಮುಂದಿನ ಕೆಲವು ದಿನಗಳಲ್ಲಿ ಬಹಳ ಆತಂಕಕಾರಿಯಾಗುವ ಸಾಧ್ಯತೆಯಿದೆ. ಸರ್ಕಾರ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದೆಹಲಿ ಜನರ ಆಗ್ರಹ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!