ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿ-20ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯ್ಲಿ ನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭೂಮಿ, ವಾಯು, ನೌಕಾನೆಲೆಗಳಲ್ಲೂ ಭದ್ರತೆ ಹೆಚ್ಚಿಸಿದ್ದು, ಕ್ಷಣಕ್ಷಣಕ್ಕೂ ಪರಿಶೀಲನೆ ನಡೆಸಲಾಗುತ್ತಿದೆ.
ಭದ್ರತಾ ಕ್ರಮವಾಗಿ ದೆಹಲಿ ಪೊಲೀಸರು ಯಮುನಾ ನದಿಯಲ್ಲಿ ಗಸ್ತು ದೋಣಿ ನಡೆಸಿದ್ದು, ಗೀತಾ ಕಾಲೋನಿ ಘಾಟ್‌ನಿಂದ ದೆಹಲಿಯ ITO ಸೇತುವೆಯವರೆಗೆ ಪರಿಶೀಲನೆ ನಡೆಸಿದರು. ನಗರದ ಹಲವು ಸಿಗ್ನಲ್‌ಗಳು ಗಡಿಗಳಲ್ಲೂ ವಾಹನ ತಪಾಸಣೆ ಮುಂದುವರಿದಿದೆ.