ಜಿ-20ಶೃಂಗಸಭೆಯ ಮೊದಲ ಅಧಿವೇಶನ, ಖಾಯಂ ಸದಸ್ಯರಾಗಿ ಆಫ್ರಿಕನ್​ ಒಕ್ಕೂಟ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಅಧ್ಯಕ್ಷತೆಯಲ್ಲಿ ಜಿ-20ಶೃಂಗಸಭೆ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಮೊದಲ ಅಧಿವೇಶನ ಆರಂಭವಾಗಿದೆ. ಶೃಂಗಸಭೆಗೆ ಆಗಮಿಸಿದ ಎಲ್ಲಾ ನಾಯಕರಿಗೆ ಸ್ವಾಗತಿಸಿದ ಪ್ರಧಾನಿ ಮೋದಿ, ಮೊದಲಿಗೆ ಜಿ 20ಯ ಖಾಯಂ ಸದಸ್ಯರಾಗಿ ಆಫ್ರಿಕನ್​ ಒಕ್ಕೂಟ ಸೇರ್ಪಡೆಯಾಗಿರುವುದ ಘೋಷಿಸಿದರು. ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಮೋದಿ ಆಹ್ವಾನಿಸಿದರು.

ಮೋದಿ ಘೋಷಣೆ ಬೆನ್ನಲ್ಲೇ ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ (AU) ಅಧ್ಯಕ್ಷ ಅಜಲಿ ಅಸ್ಸೌಮಾನಿ G2ಯ ಖಾಯಂ ಸದಸ್ಯ ಸ್ಥಾನವನ್ನು ಅಲಂಕರಿಸಿದರು. ಈ ಮೂಲಕ ಜಿ-20ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್‌ ಯೂನಿಯನ್‌ ಸೇರ್ಪಡೆಯಾಗಿದೆ.

ಜಿ 20 ಶೃಂಗಸಭೆಯಲ್ಲಿ ಪಿಎಂ ಮೋದಿ ಮಾತನಾಡುತ್ತಾ.. ಇಂದಿ ʻಸಬ್ ಕಾ ಸಾತ್, ಸಬ್ ಕಾ ವಿಕಾಸ್ʼ ಮಂತ್ರವನ್ನು ಪಠಿಸಬೇಕಿದೆ ಎಂದರು. ನಾವೆಲ್ಲರೂ ಒಟ್ಟಾಗಿ ಚಲಿಸುವ ಸಮಯ ಬಂದಿದೆ. ಈ ಬಾರಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್’ ಎಂಬ ಮಂತ್ರವು ನಮಗೆ ಬೆಳಕನ್ನು ನೀಡಲಿದೆ. ಇದು ಉತ್ತರ ಮತ್ತು ದಕ್ಷಿಣದ ನಡುವಿನ ಒಡಕು, ಪೂರ್ವ ಮತ್ತು ಪಶ್ಚಿಮ ನಡುವಿನ ಅಂತರ, ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ , ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆ, ಭವಿಷ್ಯದ ಪೀಳಿಗೆಗೆ ದೃಢವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!