Sunday, December 3, 2023

Latest Posts

ಕಳಪೆ ಮಟ್ಟಕ್ಕಿಳಿದ ದೆಹಲಿ ಮಾಲಿನ್ಯ: 500ರ ಗಡಿ ದಾಟಿದ ಗಾಳಿಯ ಗುಣಮಟ್ಟ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿಯಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನಕ್ಕೂ ಉಸಿರಾಡಲು ಯೋಗ್ಯವಲ್ಲದಷ್ಟರ ಮಟ್ಟಿಗೆ ಗಾಳಿ ಮಲಿನವಾಗಿದೆ.  ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಇಂದು (ಗುರುವಾರ) ಬೆಳಿಗ್ಗೆ ಗಾಳಿಯ ಗುಣಮಟ್ಟ 504ಸಂಖ್ಯೆಯ ಗಡಿ ದಾಟಿದೆ.

ಆನಂದ್ ವಿಹಾರ್‌ನ AQI 504, ಜಹಾಂಗೀರಪುರಿಯಲ್ಲಿ 437, ನೋಯ್ಡಾದಲ್ಲಿ 415 ಮತ್ತು ಫರಿದಾಬಾದ್‌ನಲ್ಲಿ 324, ಆರ್‌ಕೆ ಪುರಂನಲ್ಲಿ 453, ಪಂಜಾಬಿ ಬಾಗ್‌ನಲ್ಲಿ 444 ಮತ್ತು ಐಟಿಒದಲ್ಲಿ 441 ಎಕ್ಯೂಐ ದಾಖಲಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮುಂದಿನ ದಿನಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದ್ದು, ನಂತರ ವಾಯು ಮಾಲಿನ್ಯ ಕಡಿಮೆಯಾಗುವ ಸಾಧ್ಯತೆ ಇದೆ.

ಸತತ ಆರನೇ ದಿನವೂ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ದೆಹಲಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಳಿಯ ವೇಗದಲ್ಲಿ ಕೊಂಚ ಏರಿಕೆ ಹಾಗೂ ದಿಕ್ಕು ಬದಲಾವಣೆಯಿಂದ ಮಂಗಳವಾರ ಮಾಲಿನ್ಯದ ಪ್ರಮಾಣ ಕೊಂಚ ತಗ್ಗಿತ್ತು. ಇದೀಗ ಮತ್ತೆ ಏರಿಕೆ ಕಂಡಿದ್ದು, ಎತ್ತ ನೋಡಿದರೂ ಹೊಗೆ, ಮಂಜು ಕವಿದ ವಾತಾವರಣವೇ ಕಂಡುಬಂದಿದೆ.

https://twitter.com/i/status/1722429413919539358

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!