ರಾಜಸ್ಥಾನ್ ರಾಯಲ್ಸ್​​ಗೆ 189 ರನ್​ಗಳ ಸವಾಲಿನ ಗುರಿ ನೀಡಿದ ಡೆಲ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜಸ್ಥಾನ್ ರಾಯಲ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ 189 ರನ್​ಗಳ ಸವಾಲಿನ ಗುರಿ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಆಸೀಸ್ ಯುವ ಬ್ಯಾಟರ್ ಜೇಕ್ ಪ್ರೇಸರ್ ಮೆಕ್​ಗರ್ಕ್ ಕೇವಲ 9 ರನ್​ಗಳಿಸಿ ಜೋಫ್ರಾ ಆರ್ಚರ್​ ಬೌಲಿಂಗ್​​ನಲ್ಲಿ ಜೈಸ್ವಾಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಕರುಣ್ ನಾಯರ್ ಒಂದೂ ರನ್​ಗಳಿಸದೇ ರನ್​ಔಟ್ ಆಗಿ ಪೆವಿಲಿಯನ್​​ ಸೇರಿಕೊಂಡರು.

ಬಳಿಕ 3ನೇ ವಿಕೆಟ್​ಗೆ ಅಭಿಷೇಕ್ ಪೊರೆಲ್ ಹಾಗೂ ಕೆಎಲ್ ರಾಹುಲ್ 63 ರನ್​ಗಳಿಸಿದರು. .. 7 ಎಸೆತಗಳಲ್ಲಿ 24 ರನ್​ಗಳಿಸಿದ್ದ ಪೊರೆಲ್ ಒಟ್ಟಾರೆ 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 49 ರನ್​ಗಳಿಸಿ ಔಟ್ ಆದರು. ರಾಹುಲ್ 32 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ 38 ರನ್​ಗಳಿಸಿ ಆರ್ಚರ್​ಗೆ ವಿಕೆಟ್ ನೀಡಿದರು.

ನಾಯಕ ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32, ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಸಹಿತ ಅಜೇಯ 32, ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಅಜೇಯ 15 ರನ್​ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್​ 32ಕ್ಕೆ2, ವನಿಂದು ಹಸರಂಗ 38ಕ್ಕೆ1, ಮಹೀಶ್ ತೀಕ್ಷಣ 40ಕ್ಕೆ1 ವಿಕೆಟ್ ಪಡೆದು ಮಿಂಚಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!