ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ದಾಳಿಗೆ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 133 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಯಾವುದೇ ಬ್ಯಾಟರ್ ಕೂಡ ಕ್ರೀಸ್ ಕಚ್ಚಿ ಆಡುವಲ್ಲಿ ವಿಫಲರಾದರು.ಮೊದಲು 7 ಓವರ್‌ಗಳಲ್ಲಿ ಪ್ರಮುಖ 5 ವಿಕಟ್ ಕಳೆದುಕೊಂಡು ಒಂದು ಹಂತದಲ್ಲಿ 100 ರನ್ ಗಳಿಸುವುದು ಕಷ್ಟ ಎಂಬ ಸ್ಥಿತಿಗೆ ಡೆಲ್ಲಿ ಕ್ಯಾಪಿಟಲ್ಸ್ ಬಂದು ತಲುಪಿತು.
8ನೇ ವಿಕೆಟ್‌ಗೆ ಜೊತೆಯಾದ ತ್ರಿಸ್ಟನ್ ಸ್ಟಬ್ಸ್ ಹಾಗೂ ಅಶುತೋಷ್ ಶರ್ಮಾ 66 ರನ್‌ಗಳ ಜೊತೆಯಾಟ ಆಡುವ ಮೂಲಕ ಡೆಲ್ಲಿಯ ಹಠಾತ್ ಕುಸಿತವನ್ನು ತಡೆದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 133 ರನ್ ಕಲೆಹಾಕಿತು. ಆ ಮೂಲಕ ಎಸ್‌ಆರ್‌ಹೆಚ್ ತಂಡಕ್ಕೆ 134 ರನ್‌ಗಳ ಗುರಿ ನೀಡಿತು.