ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಬೆಳ್ಳಂಬೆಳಗ್ಗೆ ದೆಹಲಿಯ ಹವಾಮಾನ ಹಠಾತ್ ಬದಲಾವಣೆ ಕಂಡಿದೆ. ಜನಕ್ಕೆ ಬೆಳಗ್ಗೆ ಎದ್ದ ಕೂಡಲೇ ಹಿತವಾದ ವಾತಾವರಣ ಸ್ವಾಗತಿಸಿದೆ. ಪ್ರತಿದಿನ ಕಿರಣಗಳನ್ನು ಸೂಸುತ್ತಿದ್ದ ಸೂರ್ಯನ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ.
ಸುಡುವ ಹವಾಮಾನದಿಂದ ಹಠಾತ್ ವಿರಾಮ ಸಿಕ್ಕಿದ್ದು, ಆಹ್ಲಾದಕರ ಹವಾಮಾನದೊಂದಿಗೆ ಗುಡುಗು, ಲಘು-ತೀವ್ರತೆಯ ಮಳೆ ಮತ್ತು ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆಯನ್ನು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ ನೀಡಿದೆ.
ಸಫ್ದರ್ಜಂಗ್ ಹವಾಮಾನ ಕೇಂದ್ರದ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಮೇ 2, 1969 ರಂದು 15.1 ಡಿಗ್ರಿ ಸೆಲ್ಸಿಯಸ್ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಮುಂದೆ, ಮೇ 2, 1982 ರಂದು, ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು 15.2 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ಏತನ್ಮಧ್ಯೆ, ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 32.1 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ ಏಳು ಡಿಗ್ರಿ ಕಡಿಮೆಯಾಗಿದೆ. ಇದೀಗ ಮತ್ತೊಮ್ಮೆ 15.8ಡಿಗ್ರಿ ತಾಪಮಾನ ದಾಖಲಾಗಿದೆ.