ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ಯಮುನಾ ನದಿಯಲ್ಲಿ ನೀರಿನ ಮಟ್ಟ ಮತ್ತೊಮ್ಮೆ ಅಪಾಯದ ಮಟ್ಟಕ್ಕಿಂತ ಹೆಚ್ಚಿದ್ದು, ಮಂಗಳವಾರ ದೆಹಲಿಯ ಹಳೆಯ ರೈಲ್ವೆ ಸೇತುವೆ ಬಳಿ ನೀರಿನ ಮಟ್ಟ 205.39 ಮೀಟರ್‌ಗೆ ತಲುಪಿದೆ.
ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಅಂಕಿಅಂಶಗಳ ಪ್ರಕಾರ, ಮಂಗಳವಾರ ರಾತ್ರಿ 10 ಗಂಟೆಗೆ ನೀರಿನ ಮಟ್ಟವು 205.33 ಮೀಟರ್‌ಗಳಿಂದ 205.39 ಮೀಟರ್‌ವರೆಗೆ ಅಪಾಯದ ರೇಖೆಯನ್ನು ದಾಟಿ ಸ್ಥಿರವಾದ ಏರಿಕೆ ಕಂಡಿದೆ.
ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಯ ನೀರಿನ ಮಟ್ಟದಲ್ಲಿ ತ್ವರಿತ ಹೆಚ್ಚಳಕ್ಕೆ ಕಾರಣವಾಗಿದೆ.
ಹಳೆ ರೈಲ್ವೆ ಸೇತುವೆ ಬಳಿ ಸಂಜೆ 6 ಗಂಟೆಗೆವರೆಗೂ ನದಿ ನೀರಿನ ಮಟ್ಟ 204.94 ಮೀ ನಷ್ಟಿತ್ತು. ಬುಧವಾರ ಬೆಳಗ್ಗೆ ವೇಳೆಗೆ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗಲಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಭವಿಷ್ಯ ನುಡಿದಿದೆ.
ಕಳೆದ ಒಂದು ತಿಂಗಳ ಹಿಂದೆ ನದಿಯ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯು ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು. ರಸ್ತೆಗಳೆಲ್ಲಾ ನದಿಗಳಂತಾದ ಜನ ಪರದಾಡುವ ಪರಿಸ್ಥಿತಿ ಉಂಟಾಗಿತ್ತಿ. ಇದೀಗ ಮತ್ತೊಮ್ಮೆ ಆ ಸ್ಥಿತಿ ಬರಲಿದ್ಯಾ ಎಂದು ದೆಹಲಿ ಜನ ಭಯಭೀತರಾಗಿದ್ದಾರೆ.