September 28, 2026
Monday, September 28, 2026
spot_img

FOOD | ಗಮ್ಮತ್‌ ರುಚಿ ಕೊಡುವ ಚಿಕನ್‌ ಸುಕ್ಕಾ, ಇಂದೇ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳು
ಚಕ್ಕೆ
ಲವಂಗ
ಪಲಾವ್‌ ಎಲೆ
ಏಲಕ್ಕಿ
ಶುಂಠಿ
ಬೆಳ್ಳುಳ್ಳಿ
ಕಾಳುಮೆಣಸು
ಜೀರಿಗೆ
ಸೋಂಪು
ಒಣಮೆಣಸು
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಕಾಳು
ಚಿಕನ್‌
ಅರಿಶಿಣ
ಉಪ್ಪು


ಹೇಗೆ ಮಾಡೋದು?

ಮೊದಲು ಬಾಣಲೆಗೆ ಎಣ್ಣೆ ಒಣಮೆಣಸು, ಚಕ್ಕೆ, ಪಲಾವ್‌ ಎಲೆ, ಲವಂಗ, ಏಲಕ್ಕಿ, ಗಸಗಸೆ, ಕೊತ್ತಂಬರಿ ಕಾಳು, ಕಾಳುಮೆಣಸು, ಜೀರಿಗೆ, ಸೋಂಪು ಹಾಕಿ ಹುರಿದುಕೊಳ್ಳಿ
ನಂತರ ಆಫ್‌ ಮಾಡಿ ತಣ್ಣಗಾಗಲು ಬಿಡಿ, ಆನಂತರ ಮಿಕ್ಸಿ ಮಾಡಿ ಪುಡಿ ಮಾಡಿಕೊಳ್ಳಿ

ನಂತರ ಅದೇ ಪ್ಯಾನ್‌ಗೆ ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ, ಶುಂಠಿ, ಕಾಯಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ, ರೋಸ್ಟ್‌ ಮಾಡಿ
ಅದು ಮೆತ್ತಗಾದ ನಂತರ ಆಫ್‌ ಮಾಡಿ, ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಈ ಮಿಶ್ರಣವನ್ನು ಪುಡಿಯ ಜೊತೆ ಹಾಕಿ, ನೀರು ಹಾಕಿ ಪೇಸ್ಟ್‌ ತಯಾರಿಸಿ.

ಆನಂತರ ಕುಕ್ಕರ್‌ ಅಥವಾ ಪಾತ್ರೆಗೆ ಎಣ್ಣೆ ಪಲಾವ್‌ ಎಲೆ, ಈರುಳ್ಳಿ ಹಾಕಿ ಬಾಡಿಸಿ
ನಂತರ ಚಿಕನ್‌ ಹಾಕಿ ಅರಿಶಿಣ ಹಾಕಿ ಬೇಯಿಸಿಕೊಳ್ಳಿ, ಅರ್ಧ ಬೆಂದ ನಂತರ ಮಿಕ್ಸಿಯ ಮಸಾಲೆ ಹಾಕಿ

ನೀರು ಹಾಕಿ ಕುದಿಸಿ, ಉಪ್ಪು ನೋಡಿ, ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬಾಡಿಸಿದ್ರೆ ಚಿಕನ್‌ ಗ್ರೇವಿ ರೆಡಿ

Must Read